ADVERTISEMENT

ವಾಹನ ಸವಾರರು ರಸ್ತೆ ನಿಯಮ ಪಾಲಿಸಿ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2019, 12:21 IST
Last Updated 19 ಅಕ್ಟೋಬರ್ 2019, 12:21 IST
ಶಿವಮೊಗ್ಗದ ರೋಟರಿ ಕ್ಲಬ್ ಮಿಡ್‍ಟೌನ್ ಸಭಾಂಗಣದಲ್ಲಿ ಶನಿವಾರ ರಸ್ತೆ ಸುರಕ್ಷತೆ ಕುರಿತು ಹಮ್ಮಿಕೊಂಡಿದ್ದ ತರಬೇತಿ ಶಿಬಿರವನ್ನು ದೊಡ್ಡಪೇಟೆ ಪೋಲಿಸ್ ಠಾಣೆಯ ವೃತ್ತ ಇನ್‌ಸ್ಪೆಕ್ಟರ್‌ ಆರ್. ವಸಂತ್‍ಕುಮಾರ್ ಉದ್ಘಾಟಿಸಿದರು.
ಶಿವಮೊಗ್ಗದ ರೋಟರಿ ಕ್ಲಬ್ ಮಿಡ್‍ಟೌನ್ ಸಭಾಂಗಣದಲ್ಲಿ ಶನಿವಾರ ರಸ್ತೆ ಸುರಕ್ಷತೆ ಕುರಿತು ಹಮ್ಮಿಕೊಂಡಿದ್ದ ತರಬೇತಿ ಶಿಬಿರವನ್ನು ದೊಡ್ಡಪೇಟೆ ಪೋಲಿಸ್ ಠಾಣೆಯ ವೃತ್ತ ಇನ್‌ಸ್ಪೆಕ್ಟರ್‌ ಆರ್. ವಸಂತ್‍ಕುಮಾರ್ ಉದ್ಘಾಟಿಸಿದರು.   

ಶಿವಮೊಗ್ಗ: ‘ವಾಹನ ಸವಾರರು ಕಡ್ಡಾಯವಾಗಿ ರಸ್ತೆ ನಿಯಮಗಳನ್ನು ಪಾಲಿಸುವುದರ ಜತೆಗೆ ವಾಹನ ದಾಖಲಾತಿಗಳನ್ನು ವಾಹನದಲ್ಲೇ ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು’ ಎಂದುದೊಡ್ಡಪೇಟೆ ಪೋಲಿಸ್ ಠಾಣೆಯವೃತ್ತ ಇನ್‌ಸ್ಪೆಕ್ಟರ್‌ಆರ್. ವಸಂತ್‍ಕುಮಾರ್ ಸಲಹೆ ನೀಡಿದರು.

ರೋಟರಿ ಕ್ಲಬ್ ಶಿವಮೊಗ್ಗ ಮಿಡ್‍ಟೌನ್ ಸಭಾಂಗಣದಲ್ಲಿಶನಿವಾರ ತರಬೇತುದಾರರಿಗೆ ರಸ್ತೆ ಸುರಕ್ಷತೆ ಕುರಿತು ಹಮ್ಮಿಕೊಂಡಿದ್ದ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

‘ದ್ವಿಚಕ್ರ ವಾಹನ ಚಲಾವಣೆ ಮಾಡುವವರು ಕಡ್ಡಾಯವಾಗಿ ಐಎಸ್ಐ ಮಾರ್ಕಿನ ಹೆಲ್ಮೆಟ್‌, ನಾಲ್ಕು ಚಕ್ರ ವಾಹನ ಚಲಾವಣೆ ಮಾಡುವವರು ಸೀಟ್ ಬೆಲ್ಟ್ ಧರಿಸಬೇಕು. ಮದ್ಯಪಾನ ಮಾಡಿವಾಹನ ಚಲಾವಣೆ ಮಾಡಬಾರದು. ಅತಿಯಾದ ವೇಗಕ್ಕೆ ಕಡಿವಾಣ ಹಾಕಿ, ವಾಹನ ಚಾಲನೆ ಮಾಡುವಾಗ ರಸ್ತೆಯ ಮೇಲೆ ನಿಗಾ ಇರಬೇಕು’ ಎಂದರು.

ADVERTISEMENT

ಕ್ಲಬ್‌ನಅಧ್ಯಕ್ಷೆಸುನೀತಾ ಶ್ರೀಧರ್, ಎಂ. ಮುರಳಿ, ರವೀಂದ್ರನಾಥ್ ಐತಾಳ್‍, ಜಿ. ವಿಜಯಕುಮಾರ್, ಸುವರ್ಣ ಅವಿನಾಶ್, ಎ.ಎಂ. ಸಾಗರ್,ತೇಜಸ್ವಿನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.