ADVERTISEMENT

ಮದರಸಾ ಶಿಕ್ಷಣ ಮಂಡಳಿ: ಕ್ಯಾಂಪಸ್ ಫ್ರಂಟ್ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2022, 20:13 IST
Last Updated 24 ಆಗಸ್ಟ್ 2022, 20:13 IST

ಬೆಂಗಳೂರು:ರಾಜ್ಯದಲ್ಲಿ ಮುಸ್ಲಿಂ ಧಾರ್ಮಿಕ ಕೇಂದ್ರಗಳ ಮೇಲೆ ಸರ್ಕಾರದ ಹಸ್ತಕ್ಷೇಪ ಅಸಂವಿಧಾನಿಕ ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ಖಂಡಿಸಿದೆ.

ಮದರಸಾ ಶಿಕ್ಷಣಕ್ಕೆ ಮಂಡಳಿ ರೂಪಿಸಿ, ಧಾರ್ಮಿಕ ಶಿಕ್ಷಣದಲ್ಲಿ ಹಸ್ತಕ್ಷೇಪ ನಡೆಸುವುದು ಆರ್‌ಎಸ್‌ಎಸ್‌ ಗುಪ್ತ ಕಾರ್ಯಸೂಚಿ.
ಅಲ್ಪಸಂಖ್ಯಾತ ಧಾರ್ಮಿಕ ಶಿಕ್ಷಣ ವ್ಯವಸ್ಥೆಯ ಮೇಲೆ ಬಿಜೆಪಿಯ ಕಾನೂನು ಬಾಹಿರ ಹಸ್ತಕ್ಷೇಪವು ಸಂವಿಧಾನದ 29 ಮತ್ತು 30ನೇ ಪರಿಚ್ಛೇದದ ನೇರ ಉಲ್ಲಂಘನೆ. ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳನ್ನು ಬೆಳೆಸಿ, ಅಭಿವೃದ್ಧಿಪಡಿಸುವುದು ಸಂವಿಧಾನದ ಪ್ರತಿಪಾದನೆಯಾಗಿದೆ. ಆದರೆ, ಸಂವಿಧಾನಕ್ಕೆ ಬೆಲೆ ಕೊಡದೆ, ಸಂಘದ ಹಿತಾಸಕ್ತಿಗೋಸ್ಕರ ತಗೆದುಕೊಳ್ಳುವ ಇಂತಹ ನಿರ್ಧಾರಗಳು ಸರ್ವಾಧಿಕಾರ ಧೋರಣೆ ಪ್ರತೀಕ ಎಂದು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಅನೀಸ್ ಕುಂಬ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT