ADVERTISEMENT

ಅಪಹರಣ: ದೂರು ದಾಖಲಿಸದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2011, 6:35 IST
Last Updated 4 ಫೆಬ್ರುವರಿ 2011, 6:35 IST

ತುಮಕೂರು: ತಮ್ಮನ್ನು ಅಪಹರಣ ಮಾಡಿದ್ದವರ ವಿರುದ್ಧ ಕ್ರಮಕೈಗೊಳ್ಳದ ಗ್ರಾಮಾಂತರ ಠಾಣೆ ಪೊಲೀಸರು ತಮ್ಮ    ವಿರುದ್ಧವೇ ದೂರು ದಾಖಲಿಸುವುದಾಗಿ ಬೆದರಿಕೆ            ಹಾಕುತ್ತಿದ್ದಾರೆಂದು ಸೀತಾ ಗ್ರ್ಯಾನೈಟ್ ಕಾರ್ಖಾನೆ ಕಾರ್ಮಿಕ ಮುಖಂಡ ಗೌಡರಂಗಪ್ಪ ಆರೋಪಿಸಿದರು.
ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಬ್‌ಇನ್ಸ್‌ಪೆಕ್ಟರ್ ಸಿದ್ದರಾಜು ಅವರು, ರಾಜಿಯಾಗುವುಂತೆ ಒತ್ತಾಯಿಸುತ್ತಿದ್ದಾರೆ. ಕಂಪನಿ ಮಾಲೀಕರು ರೂ. 25 ಸಾವಿರ ಕೊಡುತ್ತಾರೆ, ತೆಗೆದುಕೊಂಡು ದೂರು ಹಿಂಪಡೆಯಬೇಕು ಎಂದು ಒತ್ತಡ        ಹಾಕುತ್ತಿದ್ದು, ಇಲ್ಲದಿದ್ದಲ್ಲಿ ತಮ್ಮ ವಿರುದ್ಧವೇ ದೂರು        ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಆಪಾದಿಸಿದರು.
ತಮ್ಮನ್ನು ಜ. 26ರಂದು ಸಂಜೆ 3.30ಕ್ಕೆ ಮಾರುತಿ      ಓಮ್ನಿಯಲ್ಲಿ ಅಪಹರಣ ಮಾಡಲಾಗಿತ್ತು. ನಂತರ ಕಣ್ಣಿಗೆ ಬಟ್ಟೆಕಟ್ಟಿ ಮನೆಯೊಂದರಲ್ಲಿ ಕೂಡಿ ಹಾಕಲಾಗಿತ್ತು. ನಂತರ ಜ. 31ರಂದು ಸಂಜೆ ಮಾಲೂರು ಸಮೀಪದ ಮಂಗಸಂದ್ರ ಎಂಬಲ್ಲಿ ಬಿಡುಗಡೆ ಮಾಡಲಾಯಿತು. ಕಾರ್ಮಿಕರ ಪರವಾಗಿ ಪ್ರತಿಭಟನೆ ನಡೆಸದಂತೆ ಈ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು. ನಂತರ ಕೋಲಾರ ಪೊಲೀಸ್ ಠಾಣೆಗೆ ತೆರಳಿ ಸಹಾಯ ಪಡೆದೆ.       ಅಪಹರಣ ಮಾಡಿದ್ದವರಲ್ಲಿ ಮಾಲೀಕರ ಭದ್ರತಾ ಸಿಬ್ಬಂದಿ ಸೊಣ್ಣೇಗೌಡ ಸೇರಿ ಇಬ್ಬರನ್ನು ತಾವು ಗುರುತಿಸುವುದಾಗಿ   ಹೇಳಿದರು.
ಸೀತಾ ಗ್ರ್ಯಾನೈಟ್ ಕಾರ್ಖಾನೆ ಮಾಲೀಕ ಅನುಭವಪೊತ್ತಾರ್ ವಿರುದ್ಧ ದೂರು ನೀಡಲಾಗಿದ್ದು, ದಾಖಲು ಮಾಡಲಾಗಿಲ್ಲ. ಆದರೆ 19 ಮಂದಿ ಕಾರ್ಮಿಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಲಾಗಿದೆ. ಕಾರ್ಮಿಕರ ವಿರುದ್ಧ ಆಡಳಿತ ಮಂಡಳಿ ನಡೆಸುತ್ತಿದ್ದ ವಿಚಾರಣೆಯಲ್ಲಿ ತಾವು ವಾದ       ಮಂಡಿಸುತ್ತಿದ್ದ ಕಾರಣ ಅಪಹರಣ ಮಾಡಲಾಯಿತು ಎಂದು ದೂರಿದರು.
ಗೋಷ್ಠಿಯಲ್ಲಿ ಮುಖಂಡರಾದ ಗಿರೀಶ್, ಟಿ.ಆರ್.ರೇವಣ್ಣ, ವಾಸುದೇವಕುಮಾರ್ ಮುಂತಾದವರು  ಭಾಗವಹಿಸಿದ್ದರು.
‘ಬಂಧಿತರು ಕರವೇ ಕಾರ್ಯಕರ್ತರಲ್ಲ’
ನಗರದ ಕ್ಯಾತ್ಸಂದ್ರ ಠಾಣೆ ವ್ಯಾಪ್ತಿಯಲ್ಲಿ ಈಚೆಗೆ ದರೋಡೆ ಪ್ರಕರಣದಲ್ಲಿ ಬಂಧಿತರಾಗಿದ್ದ ಐವರು ಕರ್ನಾಟಕ ರಕ್ಷಣಾ ವೇದಿಕೆ ಸಕ್ರಿಯ ಕಾರ್ಯಕರ್ತರು ಅಥವಾ ಪದಾಧಿಕಾರಿಗಳಲ್ಲ. ಪೊಲೀಸರಿಂದ ತಪ್ಪಿಸಿಕೊಳ್ಳಲು ಸಂಘದ ಹೆಸರನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ವೇದಿಕೆ ಸಹ ಕಾರ್ಯದರ್ಶಿ      ತನುಜ್‌ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ         ಟಿ.ಇ.ರಘುರಾಮ್ ಸ್ಪಷ್ಟನೆ ನೀಡಿದ್ದಾರೆ.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT