ADVERTISEMENT

ಕಾಡೇನಹಳ್ಳಿ ಗೋಮಾಳ: ರೈತರ ಧರಣಿ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2013, 7:05 IST
Last Updated 17 ಡಿಸೆಂಬರ್ 2013, 7:05 IST

ಚಿಕ್ಕನಾಯಕನಳ್ಳಿ: ಗೋಮಾಳ ಉಳಿಸಿ ಎಂದು ಆಗ್ರಹಿಸಿ ಕಾಡೇನಹಳ್ಳಿ ಗ್ರಾಮಸ್ಥರು, ರೈತ ಮುಖಂಡರು ಸೋಮವಾರ ಪಟ್ಟಣ­ದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

ರೈತ ಮುಖಂಡ ಮಲ್ಲಣ್ಣ ಮಾತ­ನಾಡಿ, ಪುರಸಭೆ ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕ­ಪಕ್ಷೀಯ ನಿರ್ಧಾರ ತೆಗೆದು­ಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಡೇನಹಳ್ಳಿ ಗ್ರಾಮದ ಸರ್ವೆ ನಂ.31ರಲ್ಲಿ ಬರುವ 5.3 ಎಕರೆ ಗೋಮಾಳವನ್ನು ಕೆಎಸ್ಆರ್‌ಟಿ ಡಿಪೊ ನಿರ್ಮಾಣಕ್ಕಾಗಿ ಪುರಸಭೆ ಗುರುತಿಸಿದೆ. ಈ ಜಮೀನನ್ನು ಪುರಸಭೆ ವಶಕ್ಕೆ ನೀಡಬೇಕು ಎಂದು ಸದಸ್ಯರ ನಿಯೋಗ ಶಾಸಕರ ಸಮ್ಮುಖದಲ್ಲೇ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದು, ಗ್ರಾಮಸ್ಥರಿಗೆ ಆಘಾತ ಉಂಟು­ಮಾಡಿದೆ ಎಂದರು.

ರೈತ ಮುಖಂಡ ಗಂಗಾಧರಪ್ಪ ಮಾತನಾಡಿ ನಮ್ಮದು ಕೃಷಿ ಬದುಕು. ದನ ಕರುಗಳಿಗೆ ಗೋಮಾಳ ಬೇಕು. ಇದರ ಜತೆ ಗ್ರಾಮದ ಮಧ್ಯದಲ್ಲಿರುವ ಹೆದ್ದಾರಿ ವಿಸ್ತರಣೆಯಾದರೆ ಮನೆ ಕಳೆದುಕೊಂಡವರು ಎಲ್ಲಿಗೆ ಹೋಗ­ಬೇಕು ಎಂಬುದೇ ತೋಚದಂತಾಗು­ತ್ತದೆ. ಗೋಮಾಳ ಉಳಿದರೆ ಇಲ್ಲಾ­ದರೂ ಮನೆ ಕಟ್ಟಿಕೊಳ್ಳಬಹುದು ಎಂದರು.

ಹಸಿರು ಸೇನೆ ರಾಜ್ಯ ಕಾರ್ಯದರ್ಶಿ ಕೆಂಕೆರೆ ಸತೀಶ್ ಮಾತನಾಡಿ, ಅಭಿ­ವೃದ್ಧಿ ಹೆಸರಲ್ಲಿ ಗೋಮಾಳ ಕಬಳಿ­ಸುತ್ತಿರುವ ಪುರಸಭೆ ಆಡಳಿತದ ವಿರುದ್ಧ ಹಾಗೂ ಇದಕ್ಕೆ ಮೌನ ಸಮ್ಮತಿ ಸೂಚಿಸಿರುವ ಶಾಸಕರ ವಿರುದ್ಧ ಕಿಡಿಕಾರಿದರು.

ಹೊನ್ನೆಬಾಗಿ ಗ್ರಾ.ಪಂ. ಅಧ್ಯಕ್ಷ ಗುರುಮೂರ್ತಿ, ತಮ್ಮಡಿಹಳ್ಳಿ ಮಲ್ಲಿಕಾರ್ಜುನಯ್ಯ, ಕಂಟಲಗೆರೆ ಸತೀಶ್, ತಿಮ್ಲಾಪುರ ಶಂಕರಣ್ಣ, ಬರಗೂರು ನಂಜುಂಡಯ್ಯ, ಲೋಕಣ್ಣ ಸೇರಿದಂತೆ ಹಲವು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.