ADVERTISEMENT

ಜನಕಲೋಟಿ: ಕನಿಷ್ಠ ಸೌಲಭ್ಯವೂ ಇಲ್ಲ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2011, 11:15 IST
Last Updated 22 ಅಕ್ಟೋಬರ್ 2011, 11:15 IST

ಮಧುಗಿರಿ: ಇದು ಕುಗ್ರಾಮ. ಎಂಬತ್ತಕ್ಕೂ ಹೆಚ್ಚು ಮನೆಗಳಿವೆ. ಆದರೆ ಯಾವೊಂದು ಕನಿಷ್ಠ ಸೌಲಭ್ಯವೂ ಇಲ್ಲಿಲ್ಲ... ಇದು ತಾಲ್ಲೂಕಿನ ಚಿಕ್ಕದಾಳವಾಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನಕಲೋಟಿ ದಲಿತ ಕಾಲೊನಿಯ ನೈಜ ಸ್ಥಿತಿ.

ಎರಡು ವರ್ಷದ ಹಿಂದೆ ನೀರಿನ ಸಮಸ್ಯೆ ನೀಗಿಸಲು ಬೋರ್ ಕೊರೆದು ಎರಡು ಸಿಸ್ಟನ್ ಅಳವಡಿಸಲಾಗಿದೆ. ಆದರೆ ಒಂದೂ ದಿನವೂ ಅದರೊಳಗೆ ಒಂದು ಹನಿ ನೀರು ಹರಿಸಿಲ್ಲ. ಉಳಿದ ಎರಡು ಸಿಸ್ಟನ್ ಮುಂದೆ ನೀರಿಗಾಗಿ ಗಂಟೆಗಟ್ಟಲೇ ಕಾಯುವುದು ತಪ್ಪದು. ಕೈಪಂಪು ಕೆಟ್ಟಿವೆ. ಗ್ರಾಮದ ಜನತೆ ನೀರಿಗಾಗಿ ಹಾಹಾಕಾರ ಪಡುತ್ತಿರುವುದು ಈಗಲೂ ತಪ್ಪಿಲ್ಲ.

ಮುಖ್ಯ ರಸ್ತೆಯಿಂದ ಕಾಲೊನಿ ಒಳಗೆ ಕೆಲದೂರ ಸಿಮೆಂಟ್ ರಸ್ತೆ ನಿರ್ಮಿಸಲಾಗಿದೆ. ಒಳ ಹೊಕ್ಕರೆ ಕಾಣುವುದೇ ಬೇರೆ. ರಸ್ತೆ ಬದಿ ದಟ್ಟ ಜಾಲಿ ಪೊದೆಗಳು, ಮನೆಗಳಿಗೆ ರಸ್ತೆಯೂ ಇಲ್ಲ. ಬೀದಿ ದೀಪ ವೂ ಇಲ್ಲ. ಮನೆಗೆ ಹಾವು- ಚೇಳು ಬರುವುದೇ ಹೆಚ್ಚು.

ಶೌಚಕ್ಕೆ ಬಯಲೇ ಗತಿ. ಸಾಕಷ್ಟು ಕುಟುಂಬಗಳು ಈಗಲೂ ಗುಡಿಸಲುಗಳಲ್ಲೇ ಬದುಕು ಸಾಗಿಸುತ್ತಿವೆ. ಕಾಲೊನಿ ಎದುರಿಸುತ್ತಿರುವ ಸಮಸ್ಯೆಗಳ ಸರಮಾಲೆಯನ್ನು ಅಧಿಕಾರಿಗಳು, ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಚಿಕ್ಕಾಸಿನ ಪ್ರಯೋಜನ ಸಿಕ್ಕಿಲ್ಲ ಎನ್ನುತ್ತಾರೆ ಸ್ಥಳೀಯ ನಿವಾಸಿ ನಾಗಕೃಷ್ಣಯ್ಯ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.