ADVERTISEMENT

ಡೊಂಕಿಹಳ್ಳಿಗೊಲ್ಲರಹಟ್ಟಿ: ಕುಡಿಯುವ ನೀರಿಗೆ ಪರದಾಟ

ಹಲವು ತಿಂಗಗಳಿಂದ ಕುಡಿಯಲು ನೀರಿಲ್ಲ: ದೂರು

​ಪ್ರಜಾವಾಣಿ ವಾರ್ತೆ
Published 4 ಮೇ 2018, 12:24 IST
Last Updated 4 ಮೇ 2018, 12:24 IST
ತುರುವೇಕೆರೆ ತಾಲ್ಲೂಕಿನ ತಾಳಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಡೊಂಕಿಹಳ್ಳಿಗೊಲ್ಲರಹಟ್ಟಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿ ಜನರು ನೀರು ಹಿಡಿಯಲು ಸರತಿ ಸಾಲಿನಲ್ಲಿ ನಿಂತಿರುವುದು.
ತುರುವೇಕೆರೆ ತಾಲ್ಲೂಕಿನ ತಾಳಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಡೊಂಕಿಹಳ್ಳಿಗೊಲ್ಲರಹಟ್ಟಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿ ಜನರು ನೀರು ಹಿಡಿಯಲು ಸರತಿ ಸಾಲಿನಲ್ಲಿ ನಿಂತಿರುವುದು.   

ತುರುವೇಕೆರೆ: ತಾಲ್ಲೂಕಿನ ತಾಳಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಡೊಂಕಿಹಳ್ಳಿಗೊಲ್ಲರಹಟ್ಟಿ ಗ್ರಾಮಕ್ಕೆ ಹಲವು ತಿಂಗಗಳಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಜನರು ಕುಡಿಯುವ ನೀರಿಗಾಗಿ ಪರಿತಪಿಸುವಂತಾಗಿದೆ ಎಂದು ಗ್ರಾಮಸ್ಥರು ದೂರಿದರು.

ಗೊಲ್ಲರಹಟ್ಟಿಯಲ್ಲಿ  1 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ದಿದೆ. ಆದರೆ ಕೇವಲ ಒಂದು ಕೊಳವೆ ಬಾವಿ ಮಾತ್ರ ಇದೆ. ಆರೇಳು ಸಿಸ್ಟನ್ ಇದ್ದರೂ ಕೆಲ ತಿಂಗಳಿನಿಂದ ಕೊಳವೆ ಬಾವಿಯಲ್ಲಿ ಸಮರ್ಪಕವಾಗಿ ನೀರು ಬರುತ್ತಿಲ್ಲ. ಇದರಿಂದ ನೀರಿಗೆ ಪಡಿಪಾಟಲು ಬೀಳುವಂತ ಸ್ಥಿತಿ ಬಂದಿದೆ.

 ಗ್ರಾಮ ಪಂಚಾಯಿತಿ ಅಧ್ಯಕ್ಷರು, ಪಿಡಿಒ ಹಾಗೂ ತಾಲ್ಲೂಕು ಪಂಚಾಯಿತಿ ಇ.ಒ ಅವರಿಗೂ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ದೂರು ನೀಡಿದರೂ ಸಮಸ್ಯೆ ಮಾತ್ರ ಬಗೆಹರಿಯುತ್ತಿಲ್ಲ. ಸಮಸ್ಯೆ ಕೇಳುವ ಅಧಿಕಾರಿಗಳು ಮಾತ್ರ ಸಮಸ್ಯೆ ನಿಯಂತ್ರಣಕ್ಕೆ ಮುಂದಾಗುತ್ತಿಲ್ಲ ಎಂದು ಗ್ರಾಮಸ್ಥರು ಅವಲತ್ತುಕೊಂಡರು.

ADVERTISEMENT

ಗ್ರಾಮದ ಮುಖಂಡ ಪರಮೇಶ ಮಾತನಾಡಿ, ಗ್ರಾಮದಲ್ಲಿರುವ ಜನರು ಕುಡಿಯುವ ನೀರನ್ನು ತರಲು ಹರಸಾಹಸ ಪಡುತ್ತಾರೆ. ಇದಾಗ್ಯೂ ಗ್ರಾಮ ಪಂಚಾಯಿತಿಯ ಅಧಿಕಾರಿಗುಳು ಮಾತ್ರ  ಕುಡಿಯುವ ನೀರು ಪೂರೈಸದೆ ಕೇವಲ ಸಬೂಬು ಹೇಳುತ್ತಾರೆ ಎನ್ನುವುದು ಜನರ ಆರೋಪ.

ಪ್ರತಿ ದಿನ ಎರಡು ಬಿಂದಿಗೆ ನೀರು ಹಿಡಿಯಲು ಗಂಟೆಗಟ್ಟಲೇ ನಿಲ್ಲಬೇಕಿದೆ.  ಒಂದು ಕಿ.ಮೀ ದೂರದ ಜಮೀನುಗಳಿಗೆ ತೆರಳಿದರೂ ನೀರು ಸಿಗುತ್ತಿಲ್ಲ. ಶ್ರೀಘ್ರವೇ ನಮ್ಮ ಗ್ರಾಮಕ್ಕೆ ಸಮರ್ಪಕ ನೀರು ನೀಡಬೇಕು ಎಂದು ಮಂಜುಳಾ  ಒತ್ತಾಯಿಸಿದರು.

ಪಿಡಿಒ ಸೋಮಶೇಖರ್ ಮಾತನಾಡಿ, ಈ ಬಗ್ಗೆ ಈಗಾಗಲೇ  ಹೊಸ ಕೊಳವೆಬಾವಿ ಕೊರೆಯಿಸಲಾಗಿದೆ. ಕಾಮಗಾರಿ ಪೂರೈಸಿದ ನಂತರ ನಮ್ಮ ಸುಪರ್ದಿಗೆ ನೀಡಲಿದ್ದಾರೆ. ಸದ್ಯಕ್ಕೆ ಟ್ಯಾಂಕ್ ಮೂಲಕ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.