ADVERTISEMENT

ಬಡವರ ಕಡೆ ಗಮನಿಸಿ: ಸುಧಾಮೂರ್ತಿ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2012, 7:50 IST
Last Updated 7 ಅಕ್ಟೋಬರ್ 2012, 7:50 IST

ತುಮಕೂರು: ರಾಷ್ಟ್ರವು ಅನೇಕ ಹಿಂದುಳಿದ, ನಿರ್ಗತಿಕ, ಬಡ ಸಮುದಾಯಗಳನ್ನು ಹೊಂದಿದೆ. ಈ ಸಮುದಾಯಗಳ ಅಭಿವೃದ್ಧಿಯಾಗಬೇಕಾದರೆ ಉಳ್ಳವರು ದಾನ ಪ್ರವೃತ್ತಿ ಸಲ್ಲಬೇಕಾಗುತ್ತದೆ ಎಂದು ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ  ಡಾ.ಸುಧಾಮೂರ್ತಿ ಇಲ್ಲಿ ತಿಳಿಸಿದರು.

ತುಮಕೂರು ವಿಶ್ವವಿದ್ಯಾಲಯ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಕೇಂದ್ರ ಶುಕ್ರವಾರ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಉಳ್ಳವರು ತಮ್ಮ ಮಟ್ಟದಲ್ಲಿ ಬಡ ಕುಟುಂಬಗಳಿಗೆ ಸಹಾಯ ನೀಡಿ, ಬಡವ ಮತ್ತು ಬಲ್ಲಿದರ ನಡುವಿನ ಅಂತರವನ್ನು ಕಡಿಮೆ ಮಾಡಲು ಮುಂದಾದಾಗ ಸಾಮಾಜಿಕ ಸಹಬಾಳ್ವೆ ತರಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಸಮಾಜ ಸೇವೆಯನ್ನು ಪ್ರೀತಿಯಿಂದ ಮಾಡಬೇಕಾದ ಅವಶ್ಯಕತೆ ಇದ್ದು, ನಂತರದಲ್ಲಿ ಅನುಕಂಪದ ಆಧಾರದ ಮೇಲೆ ನಿಲ್ಲಬಾರದು. ಸಮಾಜ ಸೇವೆಯು ಪ್ರತಿ ಭಾರತೀಯರ ಪ್ರವೃತ್ತಿಯಾಗಬೇಕು ಎಂದು ಹೇಳಿದರು.
ಇನ್ಫೋಸಿಸ್ ಫೌಂಡೇಷನ್‌ನಿಂದ ಆರ್ಥಿಕ ಸಹಾಯ ಮತ್ತು ಶಿಫಾರಸು ಪತ್ರ ಪಡೆದ ತಂದೆಯೋರ್ವ ತನ್ನ ಮಗನ ಕ್ಯಾನ್ಸರ್ ರೋಗ ಗುಣಪಡಿಸುವ ಬದಲು ಎರಡು ಆಟೊ ಖರೀದಿಸಿ ಮಗನ ಸಾವಿಗೆ ಕಾರಣನಾದ ಘಟನೆಯನ್ನು ಹೇಳಿದರು.

ಕುಲಪತಿ ಡಾ.ಎಸ್.ಸಿ.ಶರ್ಮಾ, ಕುಲಸಚಿವ ಡಾ.ಡಿ.ಶಿವಲಿಂಗಯ್ಯ, ಪರೀಕ್ಷಾಂಗ ಕುಲಸಚಿವ ಲಕ್ಷ್ಮೀಕಾಂತ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.