ಚಿಕ್ಕನಾಯಕನಹಳ್ಳಿ: ಕೆಎಸ್‌ಆರ್‌ಟಿಸಿ ಡಿಪೊಗೆ ಜಾಗ ನೀಡುವಂತೆ ಕೋರಿ ಪುರಸಭೆ ಸದಸ್ಯರ ನಿಯೋಗ ಗುರುವಾರ ಜಿಲ್ಲಾಧಿಕಾರಿ ಸತ್ಯಮೂರ್ತಿ ಅವರಿಗೆ ಮನವಿ ಸಲ್ಲಿಸಿತು. ಪುರಸಭೆ ಅಧ್ಯಕ್ಷೆ ಗೀತಾ ಮಾತನಾಡಿ, ಕೆಎಸ್ಆರ್ಟಿಸಿ ನಿಯಂತ್ರಣಾಧಿಕಾರಿ ಕೋರಿಕೆ ಮೆರೆಗೆ ಪಟ್ಟಣದಿಂದ 2 ಕಿ.ಮೀ. ದೂರವಿರುವ ಕಾಡೇನಹಳ್ಳಿ ಬಳಿ 6.3 ಎಕರೆ ಗೋಮಾಳದ ಜಮೀನು ಗುರುತಿಸಲಾಗಿದೆ.
ಜಮೀನನ್ನು ಡಿಪೊಗೆ ಮುಂಜೂರು ಮಾಡಿದರೆ ತಾಲ್ಲೂಕಿನಲ್ಲಿ ಸಾರಿಗೆ ವ್ಯವಸ್ಥೆಯನ್ನು ಸುಗಮಗೊಳಿಸಲು ಸಹಕಾರಿಯಾಗುತ್ತದೆ ಎಂದರು. ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ಮಾತನಾಡಿ ಸ್ಥಳದ ಅಭಾವದಿಂದ ಡಿಪೊ ನಿರ್ಮಾಣ ನೆನೆಗುದಿಗೆ ಬಿದ್ದಿದೆ. ಈಗಾಗಲೆ ಪುರಸಭೆಯಲ್ಲಿ ₨ 6 ಲಕ್ಷ ಹಣವನ್ನು ಡಿಪೊ ನಿರ್ಮಾಣಕ್ಕಾಗಿ ಮೀಸಲಿರಿಸಲಾಗಿದೆ. ಡಿಪೊ ನಿರ್ಮಾಣದಿಂದ ಸಾವಿರಾರು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಸಹಕಾರಿಯಾಗಲಿದೆ ಎಂದರು.
ಶಾಸಕ ಸಿ.ಬಿ.ಸುರೇಶ್ ಬಾಬು, ಪುರಸಭೆ ಉಪಾಧ್ಯಕ್ಷೆ ನೇತ್ರಾವತಿ, ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್, ಸದಸ್ಯರಾದ ಎಚ್.ಬಿ.ಪ್ರಕಾಶ್್, ಸಿ.ಎಸ್.ರಮೇಶ್, ಮಲ್ಲೇಶಯ್ಯ, ಮಹಮದ್ ಖಲಂದರ್, ಸಿ.ಪಿ.ಮಹೇಶ್, ಎಂ.ಕೆ.ರವಿಚಂದ್ರ, ರಾಜಶೇಖರ್, ಧರಣಿ ಲಕ್ಕಪ್ಪ, ರೂಪಾ, ಇಂದಿರಮ್ಮ, ರೇಣುಕಮ್ಮ, ಪ್ರೇಮಾ, ಅಶೋಕ್ ಹಾಗೂ ಸಿ.ಆರ್.ತಿಮ್ಮರಾಯಪ್ಪ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.