ADVERTISEMENT

ಮನಸೆಳೆದ ಹೂವಿನ ರಥ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2013, 6:48 IST
Last Updated 4 ಡಿಸೆಂಬರ್ 2013, 6:48 IST
ಗುಬ್ಬಿಯ ಚನ್ನಬಸವೇಶ್ವರಸ್ವಾಮಿ, ಮಲ್ಲಿಕಾರ್ಜುನಸ್ವಾಮಿ ಹಾಗೂ ಪಾರ್ವತಮ್ಮನವರ ಹೂವಿನ ವಾಹನ ಮಹೋತ್ಸವ ಸೋಮವಾರ ರಾತ್ರಿ ವಿಜೃಂಭಣೆಯಿಂದ ಸಾವಿರಾರು ಭಕ್ತರ ಸಮ್ಮುಖದಲ್ಲಿ ಜರುಗಿತು.
ಗುಬ್ಬಿಯ ಚನ್ನಬಸವೇಶ್ವರಸ್ವಾಮಿ, ಮಲ್ಲಿಕಾರ್ಜುನಸ್ವಾಮಿ ಹಾಗೂ ಪಾರ್ವತಮ್ಮನವರ ಹೂವಿನ ವಾಹನ ಮಹೋತ್ಸವ ಸೋಮವಾರ ರಾತ್ರಿ ವಿಜೃಂಭಣೆಯಿಂದ ಸಾವಿರಾರು ಭಕ್ತರ ಸಮ್ಮುಖದಲ್ಲಿ ಜರುಗಿತು.   

ಗುಬ್ಬಿ: ಪಟ್ಟಣದ ಗೋಸಲ ಚನ್ನ­ಬಸವೇಶ್ವರ­ಸ್ವಾಮಿ, ಮಲ್ಲಿಕಾರ್ಜುನ­ಸ್ವಾಮಿ ಹಾಗೂ ಪಾರ್ವತಮ್ಮನವರ ಹೂವಿನ ವಾಹನ ಮಹೋತ್ಸವ ಸೋಮ­ವಾರ ರಾತ್ರಿ ವಿಜೃಂಭಣೆಯಿಂದ ಸಾವಿ­ರಾರು ಭಕ್ತರ ಸಮ್ಮುಖದಲ್ಲಿ ಜರುಗಿತು.

ಕಾರ್ತೀಕ ಅಮಾವಾಸ್ಯೆಯ ಪ್ರಯುಕ್ತ ಪ್ರತಿವರ್ಷದಂತೆ ಎರಡು ರಥಗಳನ್ನು ಸಂಪೂರ್ಣ ಪುಷ್ಪಾಲಂಕರಗೊಳಿಸಿ ರಾತ್ರಿ 11ರ ನಂತರ ರಥ ಎಳೆಯಲಾಯಿತು. ವಿದ್ಯುತ್ ದೀಪಾಲಂಕರದಿಂದ ಕಂಗೊಳಿ­ಸು­ತ್ತಿದ್ದ ರಥಗಳು ಚಲಿಸಿದಂತೆ ಭಕ್ತರು ಬಾಳೆಯ ಅಂಬು ಹಾಯುವ ಮೂಲಕ ಪೂಜೆ, ಹರಕೆ ಸಲ್ಲಿಸಿದರು.

ಭಕ್ತರು ತಮ್ಮ ಮನೆ ಹಾಗೂ ಅಂಗಡಿಗಳ ಮುಂದೆ ಬಾಳೆಗಿಡವನ್ನು ಅಲಂಕರಿಸಿ ರಥದ ಆಗಮನಕ್ಕೆ ಕಾಯುತ್ತಿದ್ದರು. ಮನೆಗಳ ಮುಂದೆ ಮಾಡಿದ್ದ ಹೂವಿನ ಅಲಂಕಾರ, ರಂಗೋಲಿ ಚಿತ್ತಾರವು ನೋಡುಗರನ್ನು ಆಕರ್ಷಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.