ADVERTISEMENT

ಮಾದರಿ ರಸ್ತೆಗೆ ಎದುರಾದ ದುಸ್ಥಿತಿ

​ಪ್ರಜಾವಾಣಿ ವಾರ್ತೆ
Published 4 ಜೂನ್ 2011, 9:00 IST
Last Updated 4 ಜೂನ್ 2011, 9:00 IST
ಮಾದರಿ ರಸ್ತೆಗೆ ಎದುರಾದ ದುಸ್ಥಿತಿ
ಮಾದರಿ ರಸ್ತೆಗೆ ಎದುರಾದ ದುಸ್ಥಿತಿ   

ಮಧುಗಿರಿ: ಒಂದು ಕಾಲಕ್ಕೆ ಆಕರ್ಷಕ ಮಾದರಿ ರಸ್ತೆಯಾಗಿದ್ದ ಪಟ್ಟಣದ ದ್ವಿಪಥ ರಸ್ತೆ ಸ್ಥಳೀಯ ಆಡಳಿತ ನಿರ್ಲಕ್ಷ್ಯದಿಂದ ದುಃಸ್ಥಿತಿ ತಲುಪಿದೆ.

ಸರ್ಕಾರಿ ಪ್ರೌಢಶಾಲೆ, ಜೂನಿಯರ್ ಕಾಲೇಜು, ಪ್ರಥಮ ದರ್ಜೆ ಕಾಲೇಜು, ಕ್ರೀಡಾಂಗಣ, ಎಲ್‌ಐಸಿ, ದೂರವಾಣಿ ವಿನಿಮಯ ಕಚೇರಿ, ಡಿವೈಎಸ್‌ಪಿ ಕಚೇರಿ, ತೋಟಗಾರಿಕೆ ಇಲಾಖೆಗಳಿಗೆ ಸಂಪರ್ಕ ರಸ್ತೆಯಾಗಿದೆ. ಅಲ್ಲದೆ ಪಾವಗಡ ಶಿರಾ ಮಾರ್ಗದ ವಾಹನಗಳು ಈ ರಸ್ತೆಯಲ್ಲಿಯೇ ಹಾದು ಹೋಗಬೇಕಾಗಿರುವುದರಿಂದ ವಾಹನ ದಟ್ಟಣೆ ಸಾಮಾನ್ಯ.

`ಈ ರಸ್ತೆಯಲ್ಲಿ ಮಾಂಸದ ಮಾರುಕಟ್ಟೆ ಸಹ ಇರುವುದರಿಂದ ಹಂದಿ ನಾಯಿಗಳ ಕಾಟ ವಿಪರೀತವಾಗಿದೆ. ದ್ವಿಚಕ್ರ ವಾಹನ ಸವಾರರಂತೂ ಸ್ವಲ್ಪ ಎಚ್ಚರ ತಪ್ಪಿದರೂ ಅನಾಹುತ ಕಟ್ಟಿಟ್ಟ ಬುತ್ತಿ. ಇಂತಹ ಹದಗೆಟ್ಟ ರಸ್ತೆಯಲ್ಲಿಯೇ ಪಯಣಿಸುವುದು ನಮ್ಮ ದುರದೃಷ್ಟ ಎಂದು ಅಳಲು ತೋಡಿಕೊಳ್ಳುತ್ತಾರೆ ಸ್ಥಳೀಯ ನಾಗರಿಕ ಮಹೇಶ್.

ಈ ರಸ್ತೆಯನ್ನು ಸುಸ್ಥಿತಿಯಲ್ಲಿಡಬೇಕಾದ ಜವಾಬ್ದಾರಿ ಪುರಸಭೆಯದು. ಆದರೆ ಈ ರಸ್ತೆ ರಾಷ್ಟ್ರೀಯ ಹೆದ್ದಾರಿ ನಿರೀಕ್ಷೆಯಲ್ಲಿ ಈ ರಸ್ತೆಯ ನಿರ್ವಹಣೆ ಮಾಡಿಲ್ಲ ಎನ್ನುವುದು ಪುರಸಭೆ ಅಧಿಕಾರಿಗಳ ಸಮಜಾಯಿಷಿ.

ಹೆದ್ದಾರಿ ನೆಪವೊಡ್ಡಿ ದಶಕದಿಂದ ಈ ರಸ್ತೆ ಬಗ್ಗೆ ಏಕೆ ಗಮನ ಹರಿಸಿಲ್ಲ ಎಂಬುದು ನಾಗರಿಕರ ಪ್ರಶ್ನೆ.  ಪಟ್ಟಣದ ಉಳಿದ ರಸ್ತೆಗಳ ಸ್ಥಿತಿ ಇದಕ್ಕಿಂತ ಭಿನ್ನವಾಗಿಯೇನೂ ಇಲ್ಲ. ಆದರೆ ಸಾವಿರಾರು ವಾಹನ ನಿತ್ಯ ಸಂಚರಿಸುವುದರಿಂದ ದುರಸ್ತಿ ಅತ್ಯವಶ್ಯಕ. ಈ ಹಿನ್ನೆಲೆಯಲ್ಲಿ ಸ್ಥಳೀಯ ಆಡಳಿತ ತುರ್ತು ನಿಗಾವಹಿಸಲಿ ಎನ್ನುವುದು ಪಟ್ಟಣದ ನಾಗರಿಕರ ಆಶಯ.       
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.