ADVERTISEMENT

ಮೂರು ವರ್ಷದ ಬಳಿಕ ತುಂಬಿದ ಸಾದಲಿ ಹೊಸಕೆರೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2017, 9:36 IST
Last Updated 16 ಅಕ್ಟೋಬರ್ 2017, 9:36 IST
ಶಿಡ್ಲಘಟ್ಟ ತಾಲ್ಲೂಕಿನ ಸಾದಲಿ ಹೊಸಕೆರೆಯು ಮೂರು ವರ್ಷಗಳ ನಂತರ ತುಂಬಿ ಹರಿಯುತ್ತಿರುವ ಕಾರಣ ಸ್ಥಳೀಯರು ಕೆರೆ ದಂಡೆಯ ವೀರಗಲ್ಲಿಗೆ ಪೂಜೆ ಸಲ್ಲಿಸಿದ್ದಾರೆ
ಶಿಡ್ಲಘಟ್ಟ ತಾಲ್ಲೂಕಿನ ಸಾದಲಿ ಹೊಸಕೆರೆಯು ಮೂರು ವರ್ಷಗಳ ನಂತರ ತುಂಬಿ ಹರಿಯುತ್ತಿರುವ ಕಾರಣ ಸ್ಥಳೀಯರು ಕೆರೆ ದಂಡೆಯ ವೀರಗಲ್ಲಿಗೆ ಪೂಜೆ ಸಲ್ಲಿಸಿದ್ದಾರೆ   

ಶಿಡ್ಲಘಟ್ಟ: ತಾಲ್ಲೂಕಿನಲ್ಲಿ ಬೀಳುತ್ತಿರುವ ಮಳೆಗೆ ಸಾದಲಿ ಮತ್ತು ಎಸ್.ದೇವಗಾನಹಳ್ಳಿಯ ಹಲವು ಕೆರೆಗಳು ತುಂಬಿ ಕೋಡಿ ಹರಿಯುತ್ತಿದ್ದು, ಜನರು ಹರ್ಷಗೊಂಡಿದ್ದಾರೆ.
ಸಾದಲಿ ಹೊಸಕೆರೆಯು ಮೂರು ವರ್ಷದ ನಂತರ ತುಂಬಿ ಕೋಡಿ ಹರಿಯುತ್ತಿದೆ.

ಇದರಿಂದಾಗಿ ಸ್ಥಳೀಯರು ಕೆರೆಯ ದಂಡೆಯಲ್ಲಿರುವ ವೀರಗಲ್ಲಿಗೆ ಪೂಜೆ ಸಲ್ಲಿಸುತ್ತಿದ್ದಾರೆ. ಇಲ್ಲಿನ ಇರಗಪ್ಪನಹಳ್ಳಿ ಬಳಿಯಿರುವ ಚಾಕಪ್ಪನಹಳ್ಳಿ ಕೆರೆ, ಬಸವನಕಟ್ಟೆಯ ಬಳಿಯ ಕೆರೆ, ಸೊಣ್ಣಗಾನಹಳ್ಳಿ ಕೆರೆ, ಗೊಲ್ಲಹಳ್ಳಿ ಕೆರೆ ತುಂಬಿ ಹರಿಯುತ್ತಿವೆ.

ತಾಲ್ಲೂಕಿನಲ್ಲಿಯೇ ಅತ್ಯಂತ ದೊಡ್ಡ ಕೆರೆಯೆಂದೇ ಪ್ರಸಿದ್ಧವಾದ ರಾಮಸಮುದ್ರ ಕೆರೆಯು 12 ಅಡಿ ತುಂಬಿದ್ದು, ಇನ್ನೂ 20 ಅಡಿ ತುಂಬಾ ಬೇಕಿದೆ. ಈ ಭಾಗದ ಕೆರೆಗಳೆಲ್ಲಾ ತುಂಬುತ್ತಿದ್ದಂತೆ ಕೋಡಿ ಹರಿದು ರಾಮಸಮುದ್ರ ಕೆರೆಗೆ ನೀರು ಸೇರಲಿದ್ದು,  ಕೆರೆ ತುಂಬುವುದನ್ನು ಗ್ರಾಮಸ್ಥರು ಎದುರು ನೋಡುತ್ತಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.