ADVERTISEMENT

ವಚನ ಸಾಹಿತ್ಯ ಸಮಸ್ಯೆಗೆ ಪರಿಹಾರ

​ಪ್ರಜಾವಾಣಿ ವಾರ್ತೆ
Published 1 ಜೂನ್ 2011, 9:20 IST
Last Updated 1 ಜೂನ್ 2011, 9:20 IST

ಕುಣಿಗಲ್: ವಿಶ್ವದಲ್ಲಿನ ಸಂದಿಗ್ಧ ಸಮಸ್ಯೆಗಳಿಗೆ ಪರಿಹಾರ ಶರಣರ ವಚನ ಸಾಹಿತ್ಯದಲ್ಲಿದೆ ಎಂದು ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್ ಮಂಗಳವಾರ ತಿಳಿಸಿದರು.

ಪಟ್ಟಣದ ವೀರಶೈವ ಸಮಾಜ ಸೇವಾ ಸಮಿತಿ ಮತ್ತು ಅಕ್ಕನ ಬಳಗದ ಆಶ್ರಯದಲ್ಲಿ ಜಗಜ್ಯೋತಿ ಬಸವೇಶ್ವರ, ಜಗದ್ಗುರು ರೇಣುಕಾಚಾರ್ಯ ಮತ್ತು ಶರಣೆ ಅಕ್ಕಮಹಾದೇವಿ ಜಯಂತ್ಯುತ್ಸವದಲ್ಲಿ ಮಾತನಾಡಿ, ಬಸವಣ್ಣ ಅವರ ವಚನ ವಿಶ್ವಕ್ಕೆ ದಾರಿ ದೀಪವಾಗಿವೆ ಎಂದು ಬಣ್ಣಿಸಿದರು.

ಎಡೆಯೂರಿನ ಬಾಳೆಹೊನ್ನೂರು ಖಾಸಾ-ಶಾಖಾ ಮಠದ ರೇಣುಕ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಶಾಸಕ ಬಿ.ಬಿ. ರಾಮಸ್ವಾಮಿಗೌಡ ಅಧ್ಯಕ್ಷತೆ ವಹಿಸಿದ್ದರು. ಹುಲಿಯೂರುದುರ್ಗದ ಸಿದ್ಧಲಿಂಗಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು.

ಬಿಜೆಪಿ ಮುಖಂಡ ಡಿ.ಕೃಷ್ಣಕುಮಾರ್, ತಹಶೀಲ್ದಾರ್ ಡಾ.ರವಿ ಎಂ.ತಿರ‌್ಲಾಪುರ್, ಸ್ಟಡ್‌ಫಾರಂ ವ್ಯವಸ್ಥಾಪಕ ಡಾ.ದಿನೇಶ್, ನಿವೃತ್ತ ನೌಕರರ ಸಂಘದ ಅಧ್ಯಕ್ಷ ವೆಂಕಟೇಗೌಡ, ವೀರಶೈವ ಸಮಾಜದ ಅಧ್ಯಕ್ಷ ಮಹದೇವಯ್ಯ, ಗೌರವಾಧ್ಯಕ್ಷ ಎಸ್.ಆರ್.ಚಂದ್ರಶೇಖರಪ್ಪ, ಹಿರಿಯರಾದ ಬಿ.ಜಿ.ಚಂದ್ರಶೇಖರಯ್ಯ, ಉಪಾಧ್ಯಕ್ಷರಾದ ವಿ.ವಿ.ಆರಾಧ್ಯ, ಟಿ.ಎಂ.ಶಿವಕುಮಾರ್, ಶಿವಶಂಕರ್, ಕಾರ್ಯದರ್ಶಿ ಚಂದ್ರಶೇಖರ್ ಇತರರು ಉಪಸ್ಥಿತರಿದ್ದರು.

ಬಿ.ಎಸ್. ಸೋಮಶೇಖರ್ ಸ್ವಾಗತಿಸಿ, ಕಿರಣ್‌ಕುಮಾರ್ ವಂದಿಸಿದರು. ಗುರುನಾಥ್ ಬೂದಿಹಾಳ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.