ADVERTISEMENT

ಶವವಾದ ಕಾಂಗ್ರೆಸ್; -ಮುಖವಿಲ್ಲದ ಬಿಜೆಪಿ

ಜೆಡಿಎಸ್ ನಾಯಕ ಎ.ಕೃಷ್ಣಪ್ಪ ವ್ಯಂಗ್ಯ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2014, 6:49 IST
Last Updated 19 ಮಾರ್ಚ್ 2014, 6:49 IST

ಶಿರಾ: ಕಾಂಗ್ರೆಸ್ ಸತ್ತಿದೆ. ಅದರ ಶವ ಸ್ಮಶಾನಕ್ಕೆ ತೆಗೆದುಕೊಂಡು ಹೋಗುತ್ತಿ­ದ್ದಾರೆ. ಆದರೂ ಕೆಲ ಜನ ಇದ್ದಾರಲ್ಲ ಅಂದ್ಕೊಂಡಿದ್ದಿರಲ್ಲಾ ಅವರೆಲ್ಲ ಹೆಣ­ವನ್ನು ಗುಂಡಿಗೆ ಮುಚ್ಚಿ ಬೇರೆ ಕಡೆ ಹೋಗಲಿದ್ದಾರೆ. ಇದು ಕಾಂಗ್ರೆಸ್‌ನ ಸದ್ಯದ ಸ್ಥಿತಿ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎ.ಕೃಷ್ಣಪ್ಪ ವ್ಯಂಗ್ಯ­ವಾಡಿದರು.

ನಗರದಲ್ಲಿ ಮಂಗಳವಾರ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ಸಮೀಕ್ಷೆಯೊಂದು ಹೇಳಿರುವಂತೆ ರಾಜ್ಯ­ದಲ್ಲಿ ಬಿಜೆಪಿ ಪ್ರಥಮ ಸ್ಥಾನದಲ್ಲಿದ್ದರೆ, ಜೆಡಿಎಸ್ ದ್ವಿತೀಯ ಸ್ಥಾನದಲ್ಲಿದೆ. ಕಾಂಗ್ರೆಸ್‌ಗೆ ಮೂರನೇ ಸ್ಥಾನ. ಹೀಗಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇ­ಗೌಡರು ಲೋಕಸಭಾ ಚುನಾವಣೆ ಮುಗಿದ ಬಳಿಕ ದೆಹಲಿಯಲ್ಲಿ ಕಿಂಗ್ ಮೇಕರ್ ಆಗಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಕಳೆದ ಬಾರಿ ಬಿಜೆಪಿ ಆಡಳಿತ ನಡೆಸಿ ಸ್ವತಃ ಮುಖ್ಯಮಂತ್ರಿ­ಯಿಂದ ಹಿಡಿದು ಸಚಿವರ ದಂಡು ಜೈಲಿಗೆ ಹೋಗಿದ್ದೇ ಸಾಧನೆ. ಆದರೆ ಜೈಲಿಗೆ ಹೋಗುವಾಗಲು -ಬರುವಾ­ಗಲು ಎರಡು ತೋರು ಬೆರಳಿ ತೋರಿ ವಿಜಯದ ಸಂಕೇತ ಪ್ರದರ್ಶಿಸಿದ ಯಡಿ­ಯೂರಪ್ಪ ಸಾರ್ವಜನಿಕ ಸಂಕೋಚ-, ನಾಚಿಕೆ ಕಳೆದುಕೊಂಡಿದ್ದಾರೆ ಎಂದರು.

ಮಾಜಿ ಸಚಿವ ಬಿ.ಸತ್ಯನಾರಾಯಣ, ಚಿತ್ರದುರ್ಗ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಿ.ಯಶೋಧರ, ಚಿಕ್ಕನಾಯಕನಹಳ್ಳಿ ಕ್ಷೇತ್ರದ ಶಾಸಕ ಸಿ.ಬಿ.ಸುರೇಶ್ ಬಾಬು, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎಂ.ಆರ್.ಹುಲಿನಾಯ್ಕರ್, ಹಿರಿಯ ಮುಖಂಡ ಕೆ.ಎಲ್.ಮಹಾದೇವಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಿ.ಕೆ.ಬಡೀರಣ್ಣ, ಸಿ.ಆರ್.ಉಮೇಶ್, ರಾಜ್ಯ ಸಂಘಟನಾ ಕಾರ್ಯದರ್ಶಿ ಕಲ್ಕೆರೆ ರವಿಕುಮಾರ್, ಯುವ ಜನತಾ ದಳ ರಾಜ್ಯ ಕಾರ್ಯದರ್ಶಿ ಗೋವಿಂದರಾಜು, ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್.ಆರ್.ಗೌಡ, ಜಿಲ್ಲಾ ಯುವ ಜನತಾದಳ ಅಧ್ಯಕ್ಷ ಬೆಳ್ಳಿ ಲೋಕೇಶ್, ಬಾಂಬೆ ರಾಜಣ್ಣ ಮತ್ತಿತರರು ಮಾತನಾಡಿದರು.

ನಗರ ಜೆಡಿಎಸ್ ಅಧ್ಯಕ್ಷ ವಾಜಿದ್ ಅಹಮದ್, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷರಾದ ಚಂಪಕ ಮಾಲ, ಮುದ್ದಮಡು ರಂಗಸ್ವಾಮಿ, ಲಲಿತಮ್ಮ, ನಗರಸಭೆ ಸದಸ್ಯರಾದ ಆರ್.ಉಗ್ರೇಶ್, ಮೌನೇಶ್, ಸವಿತಾ ರವಿ, ಮಾಜಿ ಸದಸ್ಯರಾದ ಆರ್.ರಾಮು, ತಾಲ್ಲೂಕು ಜೆಡಿಎಸ್ ಕಾರ್ಯಾಧ್ಯಕ್ಷ ಸುಧಾಕರಗೌಡ, ತಾಲ್ಲೂಕು ಯುವ ಜನತಾದಳ ಅಧ್ಯಕ್ಷ ಅರೇಹಳ್ಳಿ ಬಾಬು, ಜಿಲ್ಲಾ ಯುವ ಸಂಘಟನಾ ಕಾರ್ಯದರ್ಶಿ ಕಿಟ್ಟಿ, ತಾಲ್ಲೂಕು ಎಸ್‌ಸಿ ಘಟಕದ ಅಧ್ಯಕ್ಷ ಮದ್ದಕ್ಕನಹಳ್ಳಿ ತಿಪ್ಪೇಸ್ವಾಮಿ, ಡಾ.ಶಂಕರ್ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.