ADVERTISEMENT

ಷಾರ್ಟ್ ಸರ್ಕ್ಯೂಟ್: ಸುಟ್ಟು ಕರಕಲಾದ ಟಿಟಿ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2018, 14:07 IST
Last Updated 18 ಡಿಸೆಂಬರ್ 2018, 14:07 IST
ಹೊತ್ತಿ ಉರಿಯುತ್ತಿರುವ ಟಿಟಿ ವಾಹನದ ಬೆಂಕಿ ನಂದಿಸುತ್ತಿರುವ ಅಗ್ನಿಶಾಮಕ ಸಿಬ್ಬಂದಿ
ಹೊತ್ತಿ ಉರಿಯುತ್ತಿರುವ ಟಿಟಿ ವಾಹನದ ಬೆಂಕಿ ನಂದಿಸುತ್ತಿರುವ ಅಗ್ನಿಶಾಮಕ ಸಿಬ್ಬಂದಿ   

ಹುಲಿಯೂರುದುರ್ಗ: ಪಟ್ಟಣದ ಮೂಲಕ ಶಬರಿಮಲೆ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಟೆಂಪೋ ಟ್ರಾವೆಲರ್ಸ್‌‌ ವಾಹನದ ಸ್ಟಾರ್ಟರ್ ನಲ್ಲಿ ಬೆಂಕಿಯ ಕಿಡಿ ಕಾಣಿಸಿಕೊಂಡು ಮಂಗಳವಾರ ಸುಟ್ಟು ಕರಕಲಾಯಿತು.

ವಾಹನದ ಪಂಪ್ ನಲ್ಲಿ ದೋಷ ಕಂಡುಬಂದ ಕಾರಣ ಯಾತ್ರಿಗಳು ಭಾನುವಾರ ಇನ್ನೊಂದು ವಾಹನದಲ್ಲಿ ಯಾತ್ರೆಗೆ ತೆರಳಿದ್ದರು.

ಬೆಂಗಳೂರಿನಲ್ಲಿ ರಿಪೇರಿಯಾದ ಪಂಪ್ ಅಳವಡಿಸಿದ ಮೇಲೂ ಎಂಜಿನ್ ಚಾಲನೆಗೊಳ್ಳದೆ ಇದ್ದಾಗ ಮೆಕ್ಯಾನಿಕ್ ದುರಸ್ತಿಗೆ ಮುಂದಾಗಿದ್ದಾರೆ. ರಿಪೇರಿಯಲ್ಲಿ ತೊಡಗಿರುವಂತೆಯೇ ಸ್ಟಾರ್ಟರ್ ನಲ್ಲಿ ಕಾಣಿಸಿಕೊಂಡ ಕಿಡಿ ಹೊತ್ತಿ ಉರಿಯಲಾರಂಬಿಸಿದೆ. ವಾಹನದಲ್ಲಿ ವಿರಮಿಸುತ್ತಿದ್ದ ನಾಲ್ವರು ತಕ್ಷಣವೇ ಕೆಳಗಿಳಿದು ಅಪಾಯದಿಂದ ಪಾರಾಗಿದ್ದಾರೆ. ಅಗ್ನಿಶಾಮಕ ವಾಹನ ಸ್ಥಳಕ್ಕೆ ಬರುವಷ್ಟರಲ್ಲಿ ಟಿಟಿ ಸಂಪೂರ್ಣ ಸುಟ್ಟು ಹೋಗಿತ್ತು.

ADVERTISEMENT

ಟೆಂಪೋ ಟ್ರಾವೆಲ್ ವಾಹನದ ಮಾಲೀಕ ತುಮಕೂರು ದಿಬ್ಬೂರಿನ ಡಿ.ಬಿ. ಶೇಖರ್ 'ಎರಡು ವರ್ಷಗಳ ಈಚೆಗಷ್ಟೇ ವಾಹನ ಖರೀದಿಸಿದ್ದೆ. ನನ್ನ ಆದಾಯದ ಮೂಲವಾಗಿದ್ದ ಏಕೈಕ ವಾಹನ‌ ಹೀಗೆ ಸುಟ್ಟು ಹೋದುದು ನನಗೆ ಭರಿಸಲಾದ ನಷ್ಟ' ಎಂದು ಅಲವತ್ತುಕೊಂಡರು. ಘಟನಾ ಸ್ಥಳದಲ್ಲಿ ಸೇರಿದ್ದ ಜನಜಂಗುಳಿಯನ್ನು ಪೋಲೀಸರು ನಿಯಂತ್ರಿಸಿದರು.

ವಾರದಲ್ಲಿ ಎರಡನೇ ಪ್ರಕರಣ: ಕಳೆದ ಬುಧವಾರವಷ್ಟೇ ರಾಜೇಂದ್ರ ಪುರ ರಕ್ಷಿತಾರಣ್ಯ ವಲಯದ ಮಾಗಡಿ ರಸ್ತೆಯಲ್ಲಿ ಬೆಂಗಳೂರಿನಿಂದ ನಾಗಮಂಗಲಕ್ಕೆ ಪ್ರಯಾಣಿಸುತ್ತಿದ್ದ ಎರ್ಟಿಗಾ ವಾಹನ ಎಂಜಿನ್ ನಲ್ಲಿ ಕಾಣಿಸಿಕೊಂಡ ಬೆಂಕಿಗೆ ಆಹುತಿಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.