ಗುಬ್ಬಿ: ಅಂತರರಾಷ್ಟ್ರೀಯ ಗುಣ ಮಟ್ಟದ ವ್ಯಾಸಂಗಕ್ಕೆ ಅನುಗುಣವಾದ ತಾಂತ್ರಿಕ ಪರಿಕರ ಮತ್ತು ಸಂಶೋಧಕರ ವಿನಿಮಯದಿಂದ ಗ್ರಾಮೀಣ ಮಟ್ಟದ ತಾಂತ್ರಿಕ ಮಹಾವಿದ್ಯಾಲಯಗಳಿಗೆ ಅನುಕೂಲವಾಗಲಿದೆ ಎಂದು ಜಾರ್ಜ್ ವಾಷಿಂಗ್‌ಟನ್ ವಿಶ್ವವಿದ್ಯಾಲಯದ ಪ್ರೊ.ಸ್ವೀವ್‌ಖಾನ್ ಹೇಳಿದರು.
ಗುಬ್ಬಿ ಚನ್ನಬಸವೇಶ್ವರ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಪರಸ್ಪರ ಒಡಂಬಡಿಕೆಗೆ ಸಹಿ ಹಾಕಿ ಮಾತನಾಡಿದ ಅವರು, ಅಮೆರಿಕಮತ್ತು ಭಾರತದ ತಾಂತ್ರಿಕ ವಿದ್ಯಾಲಯ ಗಳಲ್ಲಿರುವ ಗುಣಮಟ್ಟ ಹಾಗೂ ಉದ್ಯೋಗವ ಕಾಶಗಳಲ್ಲಿ ಅಂತರವಿದ್ದು, ಭಾರತ ದೇಶದಲ್ಲಿ ಅಮೇರಿಕಗೆ ಸರಿಸಮಾನವಾದ ವಿದ್ಯಾರ್ಹತೆಯನ್ನು ಗ್ರಾಮೀಣ ಮಟ್ಟದಲ್ಲಿನ ತಾಂತ್ರಿಕ ವಿದ್ಯಾಲಯದಲ್ಲಿ ಕಲಿಯುವ ಅವಕಾಶ ಕಲ್ಪಿಸಿಕೊಡುತ್ತದೆ ಎಂದರು.
ಈ ಒಪ್ಪಂದದಿಂದ ಅಮೆರಿಕ ವಿ.ವಿ.ಗೆ ಸರಿಸಮಾನ ಸಾಮಾಗ್ರಿ ವಿನಿಮಯ, ಕೋರ್ಸ್‌ಗಳ ಅಭಿವೃದ್ಧಿ, ತಾಂತ್ರಿಕ ಸಹಾಯ ಮತ್ತು ತರಬೇತಿ, ಸಮಾ ಲೋಚನಾ ಸಭೆ, ಕಾರ್ಯಾಗಾರ, ಪರಸ್ಪರ ಭಾಗವಹಿಸುವಿಕೆ ಸಾಧ್ಯವಾಗು ತ್ತದೆ ಎಂದರು.
ಗ್ರಾಮೀಣ ಮಟ್ಟದಲ್ಲಿ ಪ್ರತಿಭೆಗಳನ್ನು ಗುರುತಿಸಿ ಅವರು ಅಂತರರಾಷ್ಟ್ರೀಯ ಮಟ್ಟಕ್ಕೆ ಬೆಳೆಯಲು ಸುಲಭ ಮಾರ್ಗಕ್ಕೆ ಇದು ಅವಕಾಶವಾಗಿದೆ. ಆನ್‌ಲೈನ್ ವಿದ್ಯಾಭ್ಯಾಸ ಹಾಗೂ ಜಾಗತಿಕ ಮಟ್ಟದ ಸಂಶೋಧನೆಗೆ ಇಲ್ಲಿಯ ವಿದ್ಯಾರ್ಥಿಗಳಿಗೆ ಅವಕಾಶ ಸಿಗುತ್ತದೆ. ವಿದ್ಯಾರ್ಥಿಗಳಿಗೆ ಧನಸಹಾಯ ಮತ್ತು ಉನ್ನತಮಟ್ಟದ ವಿದ್ಯಾಭ್ಯಾಸಕ್ಕೆ ಪೂರಕ ಆಯ್ಕೆ ವಿಷಯದ ಬಗ್ಗೆ ಮಾಹಿತಿ ನೀಡುಲಾಗುವುದು ಎಂದರು.
ಸಂಸದ ಜಿ.ಎಸ್.ಬಸವರಾಜು ಮಾತ ನಾಡಿ, ಅಮೆರಿಕ ದೇಶದ ಜಾರ್ಜ್ ವಾಷಿಂಗ್‌ಟನ್ ವಿ.ವಿ., ಅಲಬಾಮಾ ಸ್ಟೇಟ್ ವಿ.ವಿ. (ಬ್ರಿಮಿಂಗ್‌ಹಾಮ್) ನಿರ್ದೇಶಕರು ಮತ್ತು ಡೀನ್‌ಗಳು ಪರಸ್ಪರ ಒಡಂಬಡಿಕೆಗೆ ಸಹಿ ಹಾಕಲಾಗಿದೆ ಎಂದರು.
ಸಂಸ್ಥೆ ಕಾರ್ಯದರ್ಶಿ ಜಿ.ಬಿ.ಜ್ಯೋತಿ ಗಣೇಶ್, ಡಾ.ಸುರೇಶ್‌ಕುಮಾರ್, ಡಾ. ಪಿ.ವೆಂಕಟೇಶ, ಡಾ.ಪ್ರದೀಪ್‌ಮೋಹನ್ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.