ADVERTISEMENT

20 ಮಿಲಿ ಗ್ರಾಂ ಚಿನ್ನದಲ್ಲಿ ಅರಳಿದ ಡಾ.ಶಿವಕುಮಾರ ಸ್ವಾಮೀಜಿ ಕಲಾಕೃತಿ!

ಭದ್ರಾವತಿಯ ಯು.ಕೆ ರವಿಚಂದ್ರನ್ ರಚಿಸಿದ ಕೃತಿ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2018, 6:12 IST
Last Updated 29 ಮಾರ್ಚ್ 2018, 6:12 IST
ಶಿವಕುಮಾರ ಸ್ವಾಮೀಜಿ ಕಲಾಕೃತಿ
ಶಿವಕುಮಾರ ಸ್ವಾಮೀಜಿ ಕಲಾಕೃತಿ   

ತುಮಕೂರು: ಸೂಕ್ಷ್ಮ ಕಲಾಕೃತಿ ರಚನೆ ಮೂಲಕ ಗಮನ ಸೆಳೆದಿರುವ ಭದ್ರಾವತಿ ಎನ್‌ಎಸ್‌ಟಿ ರಸ್ತೆ ತೇಜಸ್ವಿನಿ ಜ್ಯೂಯಲರಿ ವರ್ಕ್ಸ್ ಮಾಲೀಕ ಕೆ.ಯು. ರವಿಚಂದ್ರ ಅವರು 20 ಮಿಲಿ ಗ್ರಾಂ ಚಿನ್ನದಲ್ಲಿ ಸಿದ್ಧಗಂಗಾ ಮಠಾಧೀಶ ಡಾ.ಶಿವಕುಮಾರ ಸ್ವಾಮೀಜಿಯವರ ಕಲಾಕೃತಿ ರಚಿಸಿದ್ದಾರೆ.

ಬುಧವಾರ ಮಠಕ್ಕೆ ಪತ್ನಿ ರಾಜೇಶ್ವರಿ ಮತ್ತು ಪುತ್ರ ವೇದಾಂತ ಅವರೊಂದಿಗೆ ಭೇಟಿ ನೀಡಿದ್ದ ಅವರು, ಕಲಾಕೃತಿಯನ್ನು ಶ್ರೀಗಳಿಗೆ ತೋರಿಸಿದರು.

’ಮಿಲಿ ಗ್ರಾಂಗಳಲ್ಲಿ ಈ ರೀತಿ ಸೂಕ್ಷ್ಮ ಕಲಾಕೃತಿ ರಚಿಸುವುದು ನನ್ನ ಅಭಿರುಚಿಯಾಗಿದೆ. 7.5 ಮಿಲಿ ಗ್ರಾಂನಲ್ಲಿ ಮಹಾವೀರ, 70 ಮಿಲಿ ಗ್ರಾಂನಲ್ಲಿ ಮೆಕ್ಕಾ ಮದಿನಾ, ಐದುವರೆ ಮಿಲಿಗ್ರಾಂನಲ್ಲಿ ಏಸು, 50 ಮಿಲಿಗ್ರಾಂನಲ್ಲಿ ಹೆಲ್ಮೆಟ್ ಸೇರಿ ಅನೇಕ ಕಲಾಕೃತಿ ರಚಿಸಿದ್ದೇನೆ. ವಿಶ್ವ ಕ್ರಿಕೆಟ್ ಕಪ್‌ ಅನ್ನು 20 ಮಿಲಿಗ್ರಾಂ ಚಿನ್ನದಲ್ಲಿ ರೂಪಿಸಿದ್ದು, ಇದಕ್ಕೆ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ಮಾನ್ಯತೆ ಲಭಿಸಿದೆ’ ಎಂದು ರವಿಚಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು. ‘ಡಾ.ಶಿವಕುಮಾರ ಸ್ವಾಮೀಜಿಯವರ 111ನೇ ಜನ್ಮದಿನಾಚರಣೆ ಪ್ರಯುಕ್ತ ಅವರ ಭಾವಚಿತ್ರ ಆಧರಿಸಿ ಈ ಕಲಾಕೃತಿ ರಚಿಸಿದ್ದೇನೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.