ADVERTISEMENT

21ರಿಂದ ತುಮಕೂರು ದಸರಾ

ನಾಳೆ ಧ್ವಜ ಪೂಜೆ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2023, 6:23 IST
Last Updated 15 ಅಕ್ಟೋಬರ್ 2023, 6:23 IST
   

ತುಮಕೂರು: ದಸರಾ ಹಬ್ಬದ ಪ್ರಯುಕ್ತ ದಸರಾ ಸಮಿತಿಯಿಂದ ಅ.21ರಿಂದ 24ರ ವರೆಗೆ ನಗರದ ಜೂನಿಯರ್‌ ಕಾಲೇಜು ಮೈದಾನದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ದಸರಾ ಅಂಗವಾಗಿ ಅ.16ರಂದು ಬೆಳಿಗ್ಗೆ 8 ಗಂಟೆಗೆ ನಗರದ ಶ್ರೀರಾಮ ಮಂದಿರದಲ್ಲಿ ಗಣಪತಿ ಹೋಮ, ದುರ್ಗಾ ಹೋಮ, ಬೆಳಿಗ್ಗೆ 11.50 ಗಂಟೆಗೆ ಜೂನಿಯರ್‌ ಕಾಲೇಜು ಮೈದಾನದಲ್ಲಿ ಭೂಮಿ ಹಾಗೂ ಧ್ವಜ ಪೂಜಾ ಕಾರ್ಯಕ್ರಮ ನಡೆಯಲಿದೆ.

ಅ.21ರಂದು ಸಂಜೆ 4 ಗಂಟೆಗೆ ಶ್ರೀನಿವಾಸ ಕಲ್ಯಾಣೋತ್ಸವ ನೆರವೇರಲಿದೆ. 22ರಂದು ಬೆಳಿಗ್ಗೆ 6 ಗಂಟೆಗೆ ದಸರಾ ನಡಿಗೆ, 11 ಗಂಟೆಗೆ ಪೌರಾಣಿಕ ವೇಷಭೂಷಣ ಸ್ಪರ್ಧೆ, ಯೋಗ ಕಾರ್ಯಕ್ರಮ ಮತ್ತು ಸಂಜೆ 5.30 ಗಂಟೆಗೆ ತುಮಕೂರು ದಸರಾಗೆ ಚಾಲನೆ ನೀಡಲಾಗುತ್ತದೆ. ಕಾಮಿಡಿ ಕಿಲಾಡಿಗಳು ಖ್ಯಾತಿಯ ಜಗ್ಗಪ್ಪ ಮತ್ತ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.

ADVERTISEMENT

23ರಂದು ಬೆಳಿಗ್ಗೆ 9.30 ಗಂಟೆಗೆ ಸಾಂಸ್ಕೃತಿಕ ಮತ್ತು ಜಾನಪದ ಗೀತೆಗಳ ಸ್ಪರ್ಧೆ, ಸಂಜೆ 5.30 ಗಂಟೆಗೆ ಸಾಂಸ್ಕೃತಿಕ ನಾಡಹಬ್ಬ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಗೆಹಬ್ಬ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. 24ರಂದು ಬೆಳಿಗ್ಗೆ 10 ಗಂಟೆಗೆ ರಂಗೋಲಿ ಸ್ಪರ್ಧೆ, ಭಜನಾ ಸ್ಪರ್ಧೆ ಏರ್ಪಡಿಸಲಾಗಿದೆ. ಸಂಜೆ 4 ಗಂಟೆಗೆ ಸಾಮೂಹಿಕ ಶಮೀಪೂಜೆ ಹಾಗೂ ವಿಜಯದಶಮಿ ಮೆರವಣಿಗೆ ಇರಲಿದೆ.

ಮೆರವಣಿಗೆಯು ಜೂನಿಯರ್‌ ಕಾಲೇಜು ಮೈದಾನದಿಂದ ಬಿ.ಎಚ್‌.ರಸ್ತೆಗೆ ಸಾಗಿ, ಜನರಲ್‌ ಕಾರ್ಯಪ್ಪ ರಸ್ತೆ, ಎಂ.ಜಿ.ರಸ್ತೆ, ಅಶೋಕ ರಸ್ತೆಯ ಮೂಲಕ ಸಾಗಿ ಕೋಟೆ ಆಂಜನೇಯ ಸ್ವಾಮಿ ವೃತ್ತದ ಬಳಿ ಕೊನೆಗೊಳ್ಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.