ADVERTISEMENT

ಕಲುಷಿತ ನೀರು ಸೇವಿಸಿ 22 ಕುರಿ ಸಾವು

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2020, 7:50 IST
Last Updated 14 ಸೆಪ್ಟೆಂಬರ್ 2020, 7:50 IST
ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ವಿಷಪೂರಿತ ನೀರು ಕುಡಿದು ಮೃತಪಟ್ಟಿರುವ ಕುರಿಗಳು
ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ವಿಷಪೂರಿತ ನೀರು ಕುಡಿದು ಮೃತಪಟ್ಟಿರುವ ಕುರಿಗಳು   

ಕೋರ: ಹೋಬಳಿ ವಸಂತ ನರಸಾಪುರ ಕೈಗಾರಿಕಾ ಪ್ರದೇಶದ ಒಂದನೇ ಹಂತದಲ್ಲಿ ವಿಷಪೂರಿತ ನೀರು ಕುಡಿದು 22 ಕುರಿಗಳು ಮೃತಪಟ್ಟಿವೆ.

ತರೂರು ಹಾಗೂ ಚಿಕ್ಕದಾಸರಹಳ್ಳಿ ಗೊಲ್ಲರಹಟ್ಟಿಯ ವಲಸೆ ಕುರಿಗಾಹಿಗಳು ವಸಂತ ನರಸಾಪುರ ಕೈಗಾರಿಕಾ ಪ್ರದೇಶಕ್ಕೆ ಹೊಂದಿಕೊಂಡಂತಿರುವ ರೈತರ ಜಮೀನಿನಲ್ಲಿ ಮಂದೆ ಹಾಕಿ ಕುರಿ ಮೇಯಿಸುತ್ತಿದ್ದರು.

ಭಾನುವಾರ ಕೈಗಾರಿಕಾ ಪ್ರದೇಶದ ಅಕ್ಕಪಕ್ಕ ಕುರಿಗಾಹಿಗಳು ಕುರಿ ಮೇಯಿಸುತ್ತಿದ್ದರು. ಈ ವೇಳೆ ಫುಡ್‌ಪಾರ್ಕ್ ಸಮೀಪ ರೂಪಿಂಗ್, ಕೆಮಿಕಲ್ ಹಾಗೂ ಇತರೆ ಫ್ಯಾಕ್ಟರಿಗಳಿದ್ದು, ಈ ಕಾರ್ಖಾನೆಗಳಿಂದ ಬಿಡುಗಡೆಯಾದ ವಿಷ ತ್ಯಾಜ್ಯ ಸೇವಿಸಿ ಈ ಅವಘಡ ಸಂಭವಿಸಿರಬಹುದು ಎಂದು ಸ್ಥಳೀಯರು ಆರೋಪಿಸಿದ್ದಾರೆ.

ADVERTISEMENT

ಸ್ಥಳಕ್ಕೆ ಕೋರ ಠಾಣೆ ಪೊಲೀಸರು ಹಾಗೂ ಪಶು ವೈದ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.