ADVERTISEMENT

ಹುಳಿಯಾರು | ವಾರದಲ್ಲಿ 3 ಅಪಘಾತ, 4 ಸಾವು:

ಹೆಚ್ಚಿದ ಕೆಎಸ್‌ಆರ್‌ಟಿಸಿ ಬಸ್‌ ಅಪಘಾತ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2024, 13:27 IST
Last Updated 23 ಏಪ್ರಿಲ್ 2024, 13:27 IST
   

ಹುಳಿಯಾರು: ಪಟ್ಟಣದ ಮೂಲಕ ಹಾದು ಹೋಗುವ ಹೆದ್ದಾರಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳ ಅಪಘಾತ ಸಂಖ್ಯೆ ಹೆಚ್ಚಿದೆ. ಇತರೆ ವಾಹನಗಳ ಸವಾರರು ರಸ್ತೆಗಿಳಿಯಲು ಭಯಪಡುವಂತಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ಕಳೆದ ವಾರ ಬೀದರ್‌-ಶ್ರೀರಂಗಪಟ್ಟಣ ಹೆದ್ದಾರಿಯ ಸಾಲ್ಕಟ್ಟೆ ಕ್ರಾಸ್‌ನಿಂದ ಯಳನಡುವರೆಗಿನ 25 ಕಿ.ಮೀ ದೂರದಲ್ಲಿ ಮೂರು ಅಪಘಾತ ಪ್ರಕರಣಗಳು ವರದಿಯಾಗಿದ್ದು, ನಾಲ್ಕು ಮಂದಿ ಮೃತಪಟ್ಟಿದ್ದಾರೆ.

ಮೂರು ತಿಂಗಳಿನಿಂದ ಹುಳಿಯಾರು, ಹಂದನಕೆರೆ ಹಾಗೂ ಚಿಕ್ಕನಾಯಕನಹಳ್ಳಿ ಪೊಲೀಸ್‌ ಠಾಣೆಗಳಲ್ಲಿ ಏಳೆಂಟು ಪ್ರಕರಣ ದಾಖಲಾಗಿವೆ.

ADVERTISEMENT

ದಾಖಲಾಗಿರುವ ಎಲ್ಲ ಪ್ರಕರಣಗಳು ತುಮಕೂರು-1 ಕೆಎಸ್‌ಆರ್‌ಟಿಸಿ ವಿಭಾಗದ ಬಸ್‌ಗಳಾಗಿವೆ. ಎಲ್ಲವೂ ಹೊಸದುರ್ಗ-ಬೆಂಗಳೂರು ಮಧ್ಯೆ ಸಂಚರಿಸಿವೆ. ಬಸ್‌ಗಳಲ್ಲಿ 60ಕಿ.ಮೀ ಮೇಲೆ ಚಲಿಸದಂತೆ ವೇಗಮಿತಿ ಅಳವಡಿಸಲಾಗಿದ್ದರೂ ಅಚಾತುರ್ಯ ಸಂಭವಿಸುತ್ತಿವೆ.

ಬಸ್‌ಗಳನ್ನು ಊಟ-ತಿಂಡಿಗೆ ಹೊಟೆಲ್‌ಗಳ ಬಳಿ ನಿಲುಗಡೆ ಮಾಡಿ ಸಮಯ ಸರಿದೂಗಿಸಲು ವೇಗ ಚಾಲನೆಯೂ ಕಾರಣ ಇರಬಹುದು ಎಂದು ಪ್ರಯಾಣಿಕರು ಆರೋಪಿಸಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಸಾರಿಗೆ ಹಾಗೂ ಕೆಎಸ್‌ಆರ್‌ಟಿಸಿ ನಿಯಂತ್ರಣಾಧಿಕಾರಿ ಜಂಟಿ ಕಾರ್ಯಾಚರಣೆ ನಡೆಸಿ ಅಪಘಾತ ತಡೆಯಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.