ADVERTISEMENT

ತುಮಕೂರು: ₹11 ಲಕ್ಷ ಮೌಲ್ಯದ 30 ಬೈಕ್ ಜಪ್ತಿ

​ಪ್ರಜಾವಾಣಿ ವಾರ್ತೆ
Published 15 ಮೇ 2025, 14:23 IST
Last Updated 15 ಮೇ 2025, 14:23 IST
ತುಮಕೂರು ಪೊಲೀಸರು ಜಪ್ತಿ ಮಾಡಿರುವ ಬೈಕ್‌ಗಳು
ತುಮಕೂರು ಪೊಲೀಸರು ಜಪ್ತಿ ಮಾಡಿರುವ ಬೈಕ್‌ಗಳು   

ತುಮಕೂರು: ನಗರ ಹಾಗೂ ರಾಜ್ಯದ ವಿವಿಧೆಡೆ ಬೈಕ್ ಕಳವು ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿರುವ ಪೊಲೀಸರು, ಒಟ್ಟು ₹11.23 ಲಕ್ಷ ಮೌಲ್ಯದ 30 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿದ್ದಾರೆ.

ಬೆಂಗಳೂರು ವೈಟ್‌ಫೀಲ್ಡ್‌ ನಿವಾಸಿ ಹಾಗೂ ಆಂಧ್ರಪ್ರದೇಶದ ಅನಂತಪುರ ಜಿಲ್ಲೆ ದಾಸರಪಲ್ಲಿಯ ಕುಖ್ಯಾತ ಕಳ್ಳ ಚಿತ್ತಪ್ಪಗಾರಿ ಆನಂದ್ ಎಂಬಾತನನ್ನು ಬಂಧಿಸಲಾಗಿದೆ.

ನಗರದ ರೈಲು ನಿಲ್ದಾಣ ರಸ್ತೆಯಲ್ಲಿ ಸುಮುಖ ಭಾರದ್ವಾಜ್ ಎಂಬುವರು ನಿಲ್ಲಿಸಿದ್ದ ಹೊಂಡ ಡಿಯೋ ದ್ವಿಚಕ್ರ ವಾಹನವನ್ನು ಏಪ್ರಿಲ್ 17ರಂದು ಕಳವು ಮಾಡಲಾಗಿತ್ತು. ಈ ಸಂಬಂಧ ಹೊಸ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ADVERTISEMENT

ತಿಲಕ್ ಪಾರ್ಕ್ ಠಾಣೆ ಇನ್‌ಸ್ಪೆಕ್ಟರ್ ಪುರುಷೋತ್ತಮ್, ಹೊಸ ಬಡಾವಣೆ ಠಾಣೆ ಸಬ್‌ಇನ್‌ಸ್ಪೆಕ್ಟರ್‌ಗಳಾದ ಜಿ.ಚೇತನ್ ಕುಮಾರ್, ಮಂಗಳಮ್ಮ, ಎಎಸ್ಐ ಸೈಯದ್ ಮುಕ್ತಿಯಾರ್, ಸಿಬ್ಬಂದಿಗಳಾದ ಕೆ.ಟಿ.ನಾರಾಯಣ, ನೀಲಕಂಠಯ್ಯ, ಕುಮಾರಸ್ವಾಮಿ, ಟಿ.ಎಚ್.ಮಂಜುನಾಥ, ಸುಚಿತ್ರಾ ಪಾಲೇಕರ್, ಕೆ.ಸಿ.ಚೇತನ, ಮಂಜಪ್ಪ ಮಸಾಲವಾಡ, ಸುನಿಲ್ ಕುಮಾರ್, ಈಶ್ವರ ನೇತೃತ್ವದಲ್ಲಿ ತನಿಖಾ ತಂಡ ರಚಿಸಲಾಗಿತ್ತು.

ತನಿಖಾ ತಂಡ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದು, ಕಳ್ಳನನ್ನು ಬಂಧಿಸಿದೆ. ರಾಜ್ಯದ ವಿವಿಧೆಡೆಗಳಲ್ಲಿ ಕಳವು ಮಾಡಿದ್ದ 30 ದ್ವಿಚಕ್ರ ವಾಹನ ಜಪ್ತಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.