ADVERTISEMENT

ಸಿದ್ಧಗಂಗಾ ಮಠದ ನೀರು ತುಂಬಿದ ಗೋಕಟ್ಟೆಗೆ ಬಿದ್ದು ನಾಲ್ವರು ಸಾವು

ತುಮಕೂರಿನ ಸಿದ್ಧಗಂಗಾ ಮಠದ ಹಿಂಭಾಗದಲ್ಲಿ ಘಟನೆ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2023, 10:55 IST
Last Updated 13 ಆಗಸ್ಟ್ 2023, 10:55 IST
ಸಿದ್ದಗಂಗಾ ಮಠ, ತುಮಕೂರು
ಸಿದ್ದಗಂಗಾ ಮಠ, ತುಮಕೂರು   

ತುಮಕೂರು: ತುಮಕೂರಿನ ಸಿದ್ಧಗಂಗಾ ಮಠದ ಹಿಂಭಾಗದಲ್ಲಿ ಭಾನುವಾರ ಗೋಕಟ್ಟೆಯಲ್ಲಿ (ಕೃಷಿ ಹೊಂಡದ ರೀತಿಯ ಹೊಂಡ) ಬಿದ್ದು ನಾಲ್ವರು ಮೃತಪಟ್ಟಿದ್ದಾರೆ.

ಬೆಂಗಳೂರಿನ ಬಾಗಲಗುಂಟೆಯ ಲಕ್ಷ್ಮಿ(33), ಯಾದಗಿರಿ ಜಿಲ್ಲೆಯ ಅಜಲಪುರದ ಮಹದೇವಪ್ಪ (44), ರಾಮನಗರದ ಹರ್ಷಿತ್ (12), ಚಿಕ್ಕಬಳ್ಳಾಪುರದ ಶಂಕರ್ (12) ಮೃತರು.

ರಂಜಿತ್‌, ಶಂಕರ್, ಹರ್ಷಿತ್‌ ಮಠದಲ್ಲಿ 6ನೇ ತರಗತಿಯಲ್ಲಿ ಓದುತ್ತಿದ್ದರು. ರಂಜಿತ್‌ ತಾಯಿ ಲಕ್ಷ್ಮಿ ಮಗನನ್ನು ಭೇಟಿಯಾಗಲು ಮಠಕ್ಕೆ ಬಂದಿದ್ದರು. ರಂಜಿತ್‌ ಮತ್ತು ಇಬ್ಬರು ಸ್ನೇಹಿತರ ಜತೆ ಊಟ ಮಾಡಲು ಗೋಕಟ್ಟೆಯ ಬಳಿಗೆ ತೆರಳಿದ್ದರು. ಈ ವೇಳೆ ರಂಜಿತ್‌ ಕೈ ತೊಳೆಯಲು ಹೋಗಿ ಕಾಲು ಜಾರಿ ಬಿದ್ದಿದ್ದು, ಆತನನ್ನು ಕಾಪಾಡಲು ಹೋಗಿ ಶಂಕರ್‌ ಮತ್ತು ಹರ್ಷಿತ್ ನೀರು ಪಾಲಾಗಿದ್ದಾರೆ.

ADVERTISEMENT

ರಂಜಿತ್‌ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ನೀರಲ್ಲಿ ಮುಳಿಗಿದ ಮತ್ತಿಬ್ಬರನ್ನು ರಕ್ಷಿಸಲು ಮುಂದಾದ ಲಕ್ಷ್ಮಿ, ಮಹದೇವಪ್ಪ ಸಾವನ್ನಪ್ಪಿದ್ದಾರೆ. ಲಕ್ಷ್ಮಿ, ಹರ್ಷಿತ್ ಮೃತದೇಹಗಳನ್ನ ಹೊರತೆಗೆದಿದ್ದು, ಇನ್ನಿಬ್ಬರಿಗಾಗಿ ಹುಡುಕಾಟ ಮುಂದುವರಿದಿದೆ.

ಸ್ಥಳಕ್ಕೆ ಕ್ಯಾತ್ಸಂದ್ರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.