ADVERTISEMENT

48 ಮಂದಿಗೆ ಸೋಂಕು ದೃಢ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2020, 2:20 IST
Last Updated 20 ನವೆಂಬರ್ 2020, 2:20 IST

ತುಮಕೂರು: ಜಿಲ್ಲೆಯಲ್ಲಿ ಗುರುವಾರ 48 ಮಂದಿಗೆ ಕೊರೊನಾ ಸೋಂಕು ತಗುಲಿದೆ.

ತುಮಕೂರು ತಾಲ್ಲೂಕಿನಲ್ಲಿ 19, ಚಿಕ್ಕನಾಯಕನಹಳ್ಳಿ 4, ಗುಬ್ಬಿ 4, ಕೊರಟಗೆರೆ 2, ಕುಣಿಗಲ್ 2, ಮಧುಗಿರಿ 7, ಪಾವಗಡ 3, ಶಿರಾ 4, ತಿಪಟೂರು 1 ಮತ್ತು ತುರುವೇಕೆರೆ ತಾಲ್ಲೂಕು ವ್ಯಾಪ್ತಿಯಲ್ಲಿ ಇಬ್ಬರಿಗೆ ಸೋಂಕು ದೃಢವಾಗಿದೆ.

ಇವರಲ್ಲಿ 35 ಪುರುಷರು ಹಾಗೂ 13 ಮಹಿಳೆಯರು ಇದ್ದಾರೆ. 83 ಮಂದಿ ಗುಣಮುಖರಾಗಿದ್ದು ಮನೆಗಳಿಗೆ ಮರಳಿದರು.ಜಿಲ್ಲೆಯಲ್ಲಿ ಒಟ್ಟು 21,530 ಮಂದಿಗೆ ಕೊರೊನಾ ಸೋಂಕು ತಗುಲಿದ್ದು 20,440 ಮಂದಿ ಗುಣಮುಖರಾಗಿದ್ದಾರೆ.656 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 434 ಮಂದಿ ಮೃತಪಟ್ಟಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.