ADVERTISEMENT

ಗ್ರಾಮೀಣ ಸೊಗಡು ಬೆಳೆಯಲಿ

​ಪ್ರಜಾವಾಣಿ ವಾರ್ತೆ
Published 10 ಜನವರಿ 2018, 5:41 IST
Last Updated 10 ಜನವರಿ 2018, 5:41 IST

ತಿಪಟೂರು: ‘ಜನಪದ ಕ್ರೀಡೆಗಳು ಗ್ರಾಮೀಣ ಸೊಗಡನ್ನು ಉಳಿಸಿ, ಬೆಳೆಸಲು ಪೂರಕವಾಗಿವೆ’ ಎಂದು ಶಾಸಕ ಕೆ.ಷಡಕ್ಷರಿ ತಿಳಿಸಿದರು. ಸೊಗಡು ಜನಪದ ಹೆಜ್ಜೆ ಸಂಸ್ಥೆಯಿಂದ ಭಾನುವಾರ ನಡೆದ ಅವರೇಕಾಯಿ ಸುಲಿಯುವ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಸೊಗಡು ಎನ್ನುವುದೇ ಗ್ರಾಮೀಣ ದ್ಯೋತಕವಾಗಿದೆ. ಸೊಗಡು ಜನಪದ ಹೆಜ್ಜೆ ಸಂಸ್ಥೆಯು ಹತ್ತಾರು ವರ್ಷಗಳಿಂದ ವಿವಿಧ ರೀತಿಯ ಜನಪದ ಕಲೆ, ಕ್ರೀಡೆಗಳನ್ನು ಜೀವಂತವಾಗಿರಿಸುವ ಕಾಯಕದಲ್ಲಿ ತೊಡಗಿರುವುದು ಹೆಮ್ಮೆಯ ವಿಷಯ’ ಎಂದು ತಿಳಿಸಿದರು.

ಜಿಲ್ಲಾ ಲೀಡ್ ಬ್ಯಾಂಕ್ ಮುಖ್ಯಸ್ಥ ಜ್ಯೋತಿಗಣೇಶ್ ಮಾತನಾಡಿ, ‘ನಶಿಸಿ ಹೋಗುತ್ತಿರುವ ಗ್ರಾಮೀಣ ವಿಚಾರಗಳನ್ನು ಉಳಿಸಿ ಬೆಳೆಸುವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿ’ ಎಂದು ತಿಳಿಸಿದರು. ಸಂಸ್ಥೆ ಅಧ್ಯಕ್ಷ ಸಿರಿಗಂಧ ಗುರು ಮಾತನಾಡಿ, ‘ಇಲ್ಲಿಯ ಜನರ ಸಹಕಾರದಿಂದ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಂಡು ಬರಲಾಗುತ್ತಿದೆ’ ಎಂದರು.

ADVERTISEMENT

ಹಿರಿಯರ ವಿಭಾಗದ ಸ್ಪರ್ಧೆಯಲ್ಲಿ ಬಿಜೆಪಿ ಮುಖಂಡ ಬಿ.ಸಿ.ನಾಗೇಶ್ ಭಾಗವಹಿಸಿ ಸ್ಪರ್ಧಿಗಳಿಗೆ ಪ್ರೋತ್ಸಾಹಿಸಿದರು. ಘಟಕಿನಕೆರೆ ಗ್ರಾಮದ 72 ವರ್ಷದ ವರದಮ್ಮ ಜನಪದ ಹಾಡಿನ ಮೂಲಕ ಕಾರ್ಯಕ್ರಮ ಪ್ರಾರಂಭಿಸಲಾಯಿತು. ಸ್ಪರ್ಧೆಯಲ್ಲಿ 5 ವರ್ಷ ದಿಂದ 83 ವರ್ಷದವರಗಿನವರು ಭಾಗವಹಿಸಿದ್ದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಸುರೇಶ್, ವಿಶಾಲ ಸೋಮಶೇಖರ್, ತಾಪಂ ಸದಸ್ಯ ಪುಟ್ಟಸ್ವಾಮಿ, ಚೌಡೇಶ್ವರಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸೋಮಣ್ಣ, ಮೋಹನಕುಮಾರ್, ಎಂ.ನಿಜಗುಣ ಮತ್ತಿತರರು ಇದ್ದರು.

ಲಕ್ಷ್ಮಣಪ್ಪ ಹಾಗೂ ಶಂಕರಲಿಂಗಪ್ಪ ತೀರ್ಪುಗಾರರಾಗಿದ್ದರು. ಚಿದಾನಂದ್ ನಿರೂಪಿಸಿದರು. ನಾಲ್ಕು ವಿಭಾಗಗಳಿಂದ ಮಾದವಿ, ಗಗನ, ಚಂದನ, ಸರಸ್ವತಿ ಪ್ರಥಮ ಹಾಗೂ ಮಂಜುನಾಥ, ಲತಾ, ಮುಸ್ಕಾನ್, ಉಮಾ ಚಂದ್ರಶೇಖರ್ ದ್ವಿತೀಯ ಸ್ಥಾನ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.