ADVERTISEMENT

ತುಮಕೂರು: ಶಾಲೆಯಿಂದ ಹೊರಗುಳಿದಿದ್ದ 56 ಮಕ್ಕಳು ಶಾಲೆಗೆ ಸೇರ್ಪಡೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2025, 2:40 IST
Last Updated 18 ಜುಲೈ 2025, 2:40 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ತಿಪಟೂರು: ಶಾಲೆಗೆ ಹೋಗದೆ ಅಂಗಡಿ ಮುಂಗಟ್ಟು ಹಾಗೂ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿದ್ದ 56 ಮಕ್ಕಳನ್ನು ಶಿಕ್ಷಣ ಇಲಾಖೆ ನೇತೃತ್ವದಲ್ಲಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ಮರಳಿ ಶಾಲೆಗೆ ಸೇರಿಸಲಾಯಿತು.

ಬಾಲಕಾರ್ಮಿಕ ಹಾಗೂ ಒಬ್ಬ ಕಿಶೋರ ಕಾರ್ಮಿಕನಾಗಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ವಿದ್ಯಾರ್ಥಿಯನ್ನು ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ದಾಖಲು ಮಾಡಲಾಗಿದೆ. ಗ್ರಾಮಾಂತರ ಪ್ರದೇಶಗಳ ತೆಂಗಿನ ಕಾಯಿ ಕಾರ್ಖಾನೆಗಳಲ್ಲಿ ಬಿಹಾರದಿಂದ ವಲಸೆ ಬಂದ ಕಾರ್ಮಿಕ ಪೋಷಕರ ಜೊತೆ ಮಾತನಾಡಿ ಹತ್ತಿರದ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲು ಮಾಡಲಾಗಿದೆ.

ADVERTISEMENT

ತಾಲ್ಲೂಕಿನ ಆಲೂರು ಪ್ರಾಥಮಿಕ ಶಾಲೆಗೆ 9 ಮಕ್ಕಳು, ಹರಿಸಮುದ್ರ ಸರ್ಕಾರಿ ಶಾಲೆಗೆ ಮೂವರು, ವಿರೂಪಾಕ್ಷಪುರ ಶಾಲೆಗೆ ಒಬ್ಬರು, ಟಿ.ಎಮ್.ಮಂಜುನಾಥ ನಗರ ಶಾಲೆಗೆ ಹತ್ತು, ಭೈರನಾಯಕನಹಳ್ಳಿ ಸರ್ಕಾರಿ ಶಾಲೆಗೆ ಎಂಟು, ಭುವನೇಶ್ವರಿ ಮಣ್ಕಿಕೆರೆ ಪ್ರೌಢಶಾಲೆಗೆ ಒಬ್ಬರು, ಹುಚ್ಚನಹಟ್ಟಿ ಸರ್ಕಾರಿ ಶಾಲೆಗೆ 22 ಮಕ್ಕಳನ್ನು ದಾಖಲಿಸಲಾಗಿದೆ.

ವಿಶೇಷ ಪ್ರಕರಣಗಳಲ್ಲಿ ದಾಖಲಾದ ಮಕ್ಕಳಿಗೆ ಸರ್ಕಾರದ ಪಠ್ಯಪುಸ್ತಕ ಸಮವಸ್ತ್ರ, ಕ್ಷೀರಾ ಭಾಗ್ಯ ಯೋಜನೆ, ಮಧ್ಯಾಹ್ನ ಉಪಹಾರ ವ್ಯವಸ್ಥೆಯನ್ನು ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ಹಿಂದಿನ ಭಾಷೆಯ ಬೋಧನೆಗೆ ಅವಕಾಶ ಮಾಡಿಕೊಡಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ತಾ.ಪಂ ಕಾರ್ಯನಿರ್ವಹಣಾಧಿಕಾರಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.