ADVERTISEMENT

ಪಾವಗಡದಲ್ಲೊಂದು ಪುಟ್ಟ ಕಾಡು

ಮಾರಮ್ಮನಹಳ್ಳಿ ಬಳಿ ಸುಮಾರು 14 ಎಕರೆ ಪ್ರದೇಶದಲ್ಲಿ ಹಬ್ಬಿದೆ ವನ

ಕೆ.ಆರ್.ಜಯಸಿಂಹ
Published 5 ಜೂನ್ 2020, 11:08 IST
Last Updated 5 ಜೂನ್ 2020, 11:08 IST
ಪಾವಗಡ ತಾಲ್ಲೂಕು ಮಾರಮ್ಮನಹಳ್ಳಿ ಬಳಿಯ ಜಮೀನಿನಲ್ಲಿ ಬೆಳೆದಿರುವ ಕಾಡು ಪ್ರಬೇಧದ ಮರಗಳು
ಪಾವಗಡ ತಾಲ್ಲೂಕು ಮಾರಮ್ಮನಹಳ್ಳಿ ಬಳಿಯ ಜಮೀನಿನಲ್ಲಿ ಬೆಳೆದಿರುವ ಕಾಡು ಪ್ರಬೇಧದ ಮರಗಳು   

ಪಾವಗಡ: ಕಣ್ಣು ಹಾಯಿಸಿದಲ್ಲೆಲ್ಲ ಹಚ್ಚ ಹಸಿರು, ಹೆಜ್ಜೆ ಇಟ್ಟಲೆಲ್ಲ ತರಹೇವಾರಿ ಮರ, ಗಿಡಗಳು. ಗಂಧ, ರಕ್ತಚಂದನ, ಮಹಾಗನಿ, ಹೆಬ್ಬೇವು, ಬೇಲ, ಸೀತಾಫಲ ಬಗೆ ಬಗೆಯ ಮರ ಗಿಡಗಳ ಮೇಲೆ ಕುಳಿತ ನೂರಾರು ಪಕ್ಷಿಗಳು...

ತಾಲ್ಲೂಕಿನ ಮಾರಮ್ಮನಹಳ್ಳಿ ಬಳಿ ಸುಮಾರು 14 ಎಕರೆ ಪ್ರದೇಶದಲ್ಲಿ ಟಿ.ವಿ.ವೆಂಕಟೇಶ್, ಜಗನ್ನಾಥ್ ಸಹೋದರರ ತೋಟಕ್ಕೆ ಹೋದವರಿಗೆ ಮಲೆನಾಡಿನ ಕಾಡಿನೊಳಗೆ ಹೋದ ಅನುಭವ ಆಗದಿರದು. ಸಹೋದರರಿಬ್ಬರು ತಮ್ಮ ಜಮೀನುಗಳಲ್ಲಿ ಅಲ್ಪಾವಧಿ ಬೆಳೆಗಳನ್ನು ಬೆಳೆಯದೆ ಕಾಡು ಜಾತಿಯ ಬೆಲೆಬಾಳುವ, ಪರಿಸರಕ್ಕೆ ಅನುಕೂಲ ಆಗುವಂತಹದ ಸಾವಿರಾರು ಮರಗಳನ್ನು ಬೆಳೆಸಿದ್ದಾರೆ.

ಅಡಿಕೆ, ತೆಂಗು, ಹುಣಸೆ ಜೊತೆಗೆ ಪ್ರತ್ಯೇಕವಾಗಿ 4 ಸಾವಿರ ಹೆಬ್ಬೇವು, 2 ಸಾವಿರ ರಕ್ತಚಂದನ, 2 ಸಾವಿರ ಶ್ರೀಗಂಧ, 1500 ಮಹಾಗನಿ, 130 ನೇರಳೆ ಇತ್ಯಾದಿ ಮರಗಳನ್ನು ಬೆಳೆಸಿದ್ದಾರೆ.

ADVERTISEMENT

ಇವುಗಳ ಜೊತೆಗೆ ನಿಂಬೆ, ತೆಂಗು, ಅಡಕೆ, ಅಂಜೂರ, ಬಾಳೆ, ಸೀತಾಫಲ, ರಾಮಫಲ, ಬೇಲ, ಸಪೋಟ, ಬೆಟ್ಟದ ನೆಲ್ಲಿ ಮರಗಳನ್ನು ಬೆಳೆಸಿ ಪಕ್ಷಿ ಸಂಕುಲಕ್ಕೆ ಆಸರೆ ಕಲ್ಪಿಸಿದ್ದಾರೆ.

ಪ್ರತಿ ವರ್ಷ ಸಾಮಾಜಿಕ, ವಲಯ ಅರಣ್ಯ ಇಲಾಖೆಯಿಂದ ಸಸಿಗಳನ್ನು ತರಿಸಿ ಅಷ್ಟೇ ಮುತುವರ್ಜಿಯಿಂದ ಹನಿ ನೀರಾವರಿಯ ವ್ಯವಸ್ಥೆ ಮಾಡಿ ಸಸಿ ನೆಡುವ ಪರಿಪಾಠ ಬೆಳೆಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.