ADVERTISEMENT

ಲಂಚಕ್ಕೆ ಬೇಡಿಕೆ: ಹಿರಿಯ ಭೂ ವಿಜ್ಞಾನಿ ಟಿ.ವೆಂಕಟೇಶ್ ಎಸಿಬಿ ಬಲೆಗೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2019, 13:09 IST
Last Updated 23 ಜನವರಿ 2019, 13:09 IST

ತುಮಕೂರು: ಹೊಸದಾಗಿ ಕೊರೆಯಿಸಬೇಕಾದ ಕೊಳವೆಬಾವಿಗೆ ಪಾಯಿಂಟ್ ಮಾಡಿಕೊಡಲು ಹಾಗೂ ಈಗಾಗಲೇ ಕೊರೆಯಿಸಿರುವ ಕೊಳವೆಬಾವಿಯನ್ನು ನೋಂದಣಿ ಮಾಡಿಕೊಡಲು ₹ 4,500 ಲಂಚಕ್ಕೆ ಬೇಡಿಕೆ ಇಟ್ಟಿದ್ದ ಜಿಲ್ಲಾ ಅಂತರ್ಜಲ ನಿರ್ದೇಶನಾಲಯದ ಹಿರಿಯ ಭೂ ವಿಜ್ಞಾನಿ ಟಿ.ವೆಂಕಟೇಶ್ ಹಾಗೂ ಮಧ್ಯವರ್ತಿ ಹರ್ಷ ಎಂಬುವವರನ್ನು ಬುಧವಾರ ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳದ ಡಿವೈಎಸ್‌ಪಿ ವಿ.ರಘುಕುಮಾರ್ ನೇತೃತ್ವದ ತಂಡ ಬಂಧಿಸಿದೆ.

ತುಮಕೂರು ತಾಲ್ಲೂಕು ಬೆಳ್ಳಾವಿ ಹೋಬಳಿ ಗೌಡಿಹಳ್ಳಿ ಗೊಲ್ಲರಹಟ್ಟಿಯ ರೈತ ಸಿದ್ಧಪ್ಪ ಅವರ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಕಾರ್ಯಾಚರಣೆಯಲ್ಲಿ ಇನ್‌ಸ್ಪೆಕ್ಟರ್ ಹಾಲಪ್ಪ, ಸಿಬ್ಬಂದಿ ಶಿವಶರಣ, ನರಸಿಂಹರಾಜು ಎಚ್‌.ಸಿ, ನರಸಿಂಹರಾಜು, ಗಿರೀಶ್, ಮಹೇಶ್, ಶಿವಣ್ಣ, ಯಶೋಧ, ಪದ್ಮನಾಭ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT