ADVERTISEMENT

ದೀಕ್ಷಾ ವಿದ್ಯಾರ್ಥಿಗಳ ಸಾಧನೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2020, 1:58 IST
Last Updated 21 ಸೆಪ್ಟೆಂಬರ್ 2020, 1:58 IST
ಜೆಇಇ ಮುಖ್ಯ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದ ತುಮಕೂರು ದೀಕ್ಷಾ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು
ಜೆಇಇ ಮುಖ್ಯ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದ ತುಮಕೂರು ದೀಕ್ಷಾ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು   

ತುಮಕೂರು: ದ್ವಿತೀಯ ಪಿಯುಸಿ ಜೆಇಇ ಮುಖ್ಯ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ತುಮಕೂರಿನ ದೀಕ್ಷಾ ಸಂಸ್ಥೆ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.

ದೇಶದಾದ್ಯಂತ ಜೆಇಇ ಮುಖ್ಯ ಪರೀಕ್ಷೆಗೆ ಸುಮಾರು 12 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು. ದೀಕ್ಷಾದ ಎಲ್.ರಕ್ಷಿತ್ ತುಮಕೂರು ಜಿಲ್ಲೆಗೆ ಪ್ರಥಮ ರ‍್ಯಾಂಕ್ ಪಡೆದಿದ್ದಾರೆ. ರಾಷ್ಟ್ರಮಟ್ಟದಲ್ಲಿ 1581 ರ‍್ಯಾಂಕ್ ಪಡೆದಿದ್ದಾರೆ. ಉಳಿದಂತೆ ಜಿ.ಹರ್ಷ 8944, ಶುಭಂ ಕಶ್ಯಪ್ 10,117 ರ‍್ಯಾಂಕ್ ಪಡೆದು ಸಂಸ್ಥೆಗೆ ಕೀರ್ತಿ ತಂದಿದ್ದಾರೆ. ಒಟ್ಟು 18 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.

ಎಲ್.ರಕ್ಷಿತ್ ಮಾತನಾಡಿ, ಮುಂದೆ ಎನ್‌ಐಟಿಯಲ್ಲಿ ಶಿಕ್ಷಣ ಪಡೆದು ಸಮಾಜಕ್ಕೆ ಉತ್ತಮ ಕೊಡುಗೆ ನೀಡುವ ಅಭಿಲಾಷೆ ವ್ಯಕ್ತಪಡಿಸಿದರು. ಹರ್ಷ ಹಾಗೂ ಶುಭಂ ಕಶ್ಯಪ್ ಎನ್‌ಐಟಿ ಸೂರತ್ಕಲ್‌ನಲ್ಲಿ ಶಿಕ್ಷಣ ಪಡೆಯಲು ಇಚ್ಛಿಸಿದ್ದಾರೆ.

ADVERTISEMENT

ದೀಕ್ಷಾ ವಿದ್ಯಾರ್ಥಿಗಳು ಸಿಇಟಿಯಲ್ಲಿ ಉತ್ತಮ ಸಾಧನೆ ಮಾಡಿದ್ದು, ಶ್ರೀನಿಧಿ 116ನೇ ರ‍್ಯಾಂಕ್, ರಾಹುಲ್ 300 ರ‍್ಯಾಂಕ್‌ಗಳಿಸಿದ್ದಾರೆ. ಇವರ ಸಾಧನೆಗೆ ತುಮಕೂರು ದೀಕ್ಷಾ ಆಡಳಿತ ವಿಭಾಗದ ಮುಖ್ಯಸ್ಥ ಪ್ರದೀಪ್ ಕುಮಾರ್ ಹಾಗೂ ಶೈಕ್ಷಣಿಕ ವಿಭಾಗದ ಮುಖ್ಯಸ್ಥೆ ಲತಾದೇವಿ ಅಭಿನಂದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.