ADVERTISEMENT

ಗುರಿ ಸಾಧನೆಗೆ ದೃಢ ನಿರ್ಧಾರ ಅಗತ್ಯ: ಶ್ರೀಮತಿ

​ಪ್ರಜಾವಾಣಿ ವಾರ್ತೆ
Published 17 ಮೇ 2022, 4:11 IST
Last Updated 17 ಮೇ 2022, 4:11 IST
ಪಟ್ಟನಾಯಕನಹಳ್ಳಿಯ ಕೆ.ಪಿ.ಎಸ್.ಶಾಲೆಯ 2022-23 ನೇ ವರ್ಷದ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ನಾದೂರು ಗ್ರಾ.ಪಂ.ಅಧ್ಯಕ್ಷೆ ಶ್ರೀಮತಿ ಉದ್ಘಾಟಿಸಿದರು. ಸದಸ್ಯರಾದ ತುಳಸಿ, ಮೆಹರ್ ತಾಜ್, ಭೂತರಾಜ್, ಉಪ ಪ್ರಾಂಶುಪಾಲ ರಾಮಚಂದ್ರಪ್ಪ, ಮುಖಂಡರಾದ ಕಲ್ಲೇಗೌಡ, ಬಾಬು,ಮಧುಸೂದನ್ ಮತ್ತಿತರರು ಇದ್ದರು.

ಪಟ್ಟನಾಯಕನಹಳ್ಳಿ: ‘ವಿದ್ಯಾರ್ಥಿಗಳು ಶಾಲಾ ಪ್ರಾರಂಭದ ದಿನದಂದೇ ನಾನು ಯಶಸ್ಸು ಸಾಧಿಸಬೇಕೆಂಬ ಸಂಕಲ್ಪ ಮಾಡಿದಾಗ ಮಾತ್ರ ಜಯ ಲಭಿಸುತ್ತದೆ’ ಎಂದು ನಾದೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಹೇಳಿದರು.

ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯ 2022-23ನೇ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು
ಮಾತನಾಡಿದರು.

ಉಪ ಪ್ರಾಂಶುಪಾಲ ಎಲ್. ರಾಮಚಂದ್ರಪ್ಪ ಮಾತನಾಡಿ, ಕೊರೊನಾ ಸಂಕಷ್ಟದ ಕಾರಣ ಕಳೆದ ಎರಡು ವರ್ಷಗಳ ಕಾಲ ಶಾಲಾ ಚಟುವಟಿಕೆಗಳನ್ನು ಸರಿಯಾಗಿ ನಡೆಸಲು ಸಾಧ್ಯವಾಗಿಲ್ಲ. ಆದ ಕಾರಣ ಸರ್ಕಾರ ಕಲಿಕಾ ಚೈತನ್ಯ ವರ್ಷ ಎಂದು ಘೋಷಿಸಿದ್ದು ಮಕ್ಕಳಿಗೆ ಉತ್ಸಾಹ ಮೂಡಿಸಿದೆ ಎಂದು ಹೇಳಿದರು.

ADVERTISEMENT

ಗ್ರಾ.ಪಂ. ಸದಸ್ಯರಾದ ತುಳಸಿ, ಮೆಹರ್ ತಾಜ್, ಭೂತರಾಜ್, ಮುಖಂಡರಾದ ಕಲ್ಲೇಗೌಡ, ಮಹಮದ್ ಫಕೃದ್ದೀನ್, ಮಧುಸೂದನ್, ಶಿಕ್ಷಕರಾದ ಶಂಕರಪ್ಪ, ದಿಬ್ಬಯ್ಯ, ಬಸವಕುಮಾರ್, ರಾಜಮ್ಮ, ರಾಘವೇಂದ್ರ ಸ್ವಾಮಿ, ಕೀರ್ತಿ ಮಾಲಿನಿ, ಕಾವ್ಯಶ್ರೀ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.