ADVERTISEMENT

ತೋವಿನಕೆರೆ: ಶೇ 92ರಷ್ಟು ಬಿತ್ತನೆ ಪೂರ್ಣ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2020, 7:54 IST
Last Updated 6 ಆಗಸ್ಟ್ 2020, 7:54 IST
ತೋವಿನಕೆರೆ ಸಮೀಪದ ಕುರಂಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಭರಣಿ ಮಳೆಯಲ್ಲಿ ನಾಟಿ ಮಾಡಿರುವ ಶೇಂಗಾ ತಾಕುಗಳು
ತೋವಿನಕೆರೆ ಸಮೀಪದ ಕುರಂಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಭರಣಿ ಮಳೆಯಲ್ಲಿ ನಾಟಿ ಮಾಡಿರುವ ಶೇಂಗಾ ತಾಕುಗಳು   

ತೋವಿನಕೆರೆ: ತೋವಿನಕರೆ ರೈತ ಸಂಪರ್ಕ ಕೇಂದ್ರಕ್ಕೆ ಸೇರಿದ ಐದು ಪಂಚಾಯಿತಿ ವ್ಯಾಪ್ತಿಯಲ್ಲಿ ಶೇ 92ರಷ್ಟು ಮುಂಗಾರು ಬಿತ್ತನೆಯಾಗಿದೆ ಎಂದು ಕೃಷಿ ಅಧಿಕಾರಿ ಜಿ.ಎಂ.ನರಸಿಂಹಮೂರ್ತಿ ತಿಳಿಸಿದ್ದಾರೆ.

ರಾಗಿ, ಮುಸುಕಿನ ಜೋಳ, ಭತ್ತ, ಸಿರಿ ಧಾನ್ಯಗಳು ಸೇರಿ 2,755 ಹೆಕ್ಟೇರ್ ಪ್ರದೇಶ ನಿಗದಿ ಪಡಿಸಲಾಗಿತ್ತು. ಈಗಾಗಲೇ 2,625 ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಮುಸುಕಿನ ಜೋಳ ನಿಗದಿಪಡಿಸಿದ್ದಕ್ಕಿಂತ ಹೆಚ್ಚಾಗಿ ಬಿತ್ತನೆಯಾಗಿದೆ.

ದ್ವಿದಳ ಧಾನ್ಯಗಳಾದ ತೊಗರಿ, ಹುರುಳಿ, ಅವರೆ, ಅಲಸಂದೆ 3,255 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಗೆ ನಿಗದಿ ಪಡಿಸಲಾಗಿತ್ತು. ಈವರೆಗೆ 2,870 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಯಾಗಿದೆ. ಪ್ರತಿ ವರ್ಷ ಹೆಚ್ಚು ಬಿತ್ತನೆಯಾಗುತ್ತಿದ್ದ ಹುರುಳಿ ಈ ಮುಂಗಾರಿನಲ್ಲಿ ತೀರ ಕಡಿಮೆ ವಿಸ್ತೀರ್ಣದಲ್ಲಿ ಬಿತ್ತನೆಯಾಗಿದೆ.

ADVERTISEMENT

ಎಣ್ಣೆ ಕಾಳುಗಳಾದ ಶೇಂಗಾ ಮತ್ತು ಹರಳು 1,932 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು ಹಲವು ವರ್ಷಗಳ ನಂತರ ಗುರಿ ಮೀರಿ ಬಿತ್ತನೆಯಾಗಿದೆ ಎಂದು ಮಾಹಿತಿ ನೀಡಿದರು.

ಜುಲೈ ತಿಂಗಳ ವಾಡಿಕೆ ಮಳೆ 66.8 ಮಿ.ಮೀ. ಆಗಿದ್ದು, 15 ವರ್ಷಗಳಲ್ಲಿ ಅತಿ ಹೆಚ್ಚು ಅಂದರೆ 280 ಮಿ.ಮೀ. ಮಳೆಯಾಗಿದೆ. 2016ರಲ್ಲಿ 217 ಮಿ.ಮೀ ಮಳೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.