ADVERTISEMENT

‘ಮತದಾನದ ಹಕ್ಕು ಕೊಡಿಸಿದ ಅಂಬೇಡ್ಕರ್’

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2021, 3:53 IST
Last Updated 26 ಸೆಪ್ಟೆಂಬರ್ 2021, 3:53 IST
ತುಮಕೂರಿನಲ್ಲಿ ಬಿಎಸ್‌ಪಿ ವತಿಯಿಂದ ಹಮ್ಮಿಕೊಂಡಿದ್ದ ಪೂನಾ ಒಪ್ಪಂದ ಕಾರ್ಯಕ್ರಮದಲ್ಲಿ ಬಿ.ಆರ್‌.ಅಂಬೇಡ್ಕರ್, ಕಾನ್ಶಿರಾಂ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಬಿಎಸ್‌ಪಿ ರಾಜ್ಯ ಕಾರ್ಯದರ್ಶಿ ಶೂಲಯ್ಯ, ಜಿಲ್ಲಾ ಅಧ್ಯಕ್ಷ ಜೆ.ಎನ್.ರಾಜಸಿಂಹ, ಪ್ರಧಾನ ಕಾರ್ಯದರ್ಶಿ ಜೆ.ಸಿ.ರಂಗಧಾಮಯ್ಯ, ಮುಖಂಡರಾದ ರುದ್ರಪ್ಪ, ಕುಣಿಗಲ್‌ ಪ್ರಕಾಶ್, ಶಿರಾ ಜಿ.ಎಸ್‌.ಮಂಜುನಾಥ್, ಪಾವಗಡ ಹರೀಶ್, ಶಿವಕುಮಾರ್ ಬೆಲ್ಲದಮಡು ಇತರರು ಉಪಸ್ಥಿತರಿದ್ದರು
ತುಮಕೂರಿನಲ್ಲಿ ಬಿಎಸ್‌ಪಿ ವತಿಯಿಂದ ಹಮ್ಮಿಕೊಂಡಿದ್ದ ಪೂನಾ ಒಪ್ಪಂದ ಕಾರ್ಯಕ್ರಮದಲ್ಲಿ ಬಿ.ಆರ್‌.ಅಂಬೇಡ್ಕರ್, ಕಾನ್ಶಿರಾಂ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಬಿಎಸ್‌ಪಿ ರಾಜ್ಯ ಕಾರ್ಯದರ್ಶಿ ಶೂಲಯ್ಯ, ಜಿಲ್ಲಾ ಅಧ್ಯಕ್ಷ ಜೆ.ಎನ್.ರಾಜಸಿಂಹ, ಪ್ರಧಾನ ಕಾರ್ಯದರ್ಶಿ ಜೆ.ಸಿ.ರಂಗಧಾಮಯ್ಯ, ಮುಖಂಡರಾದ ರುದ್ರಪ್ಪ, ಕುಣಿಗಲ್‌ ಪ್ರಕಾಶ್, ಶಿರಾ ಜಿ.ಎಸ್‌.ಮಂಜುನಾಥ್, ಪಾವಗಡ ಹರೀಶ್, ಶಿವಕುಮಾರ್ ಬೆಲ್ಲದಮಡು ಇತರರು ಉಪಸ್ಥಿತರಿದ್ದರು   

ತುಮಕೂರು: ‘ನಾವು ಈ ದೇಶದ ವಾರಸುದಾರರು. ಆದರೂ ನಮಗೆ ಶಿಕ್ಷಣ, ಭೂಮಿ, ಮತದಾನದ ಹಕ್ಕು ನಿರಾಕರಿಸಲಾಗಿತ್ತು’ ಎಂದು ಬಿಎಸ್‌ಪಿ ರಾಜ್ಯ ಕಾರ್ಯದರ್ಶಿ ಶೂಲಯ್ಯ ಹೇಳಿದರು.

ಬಿಎಸ್‌ಪಿ ಜಿಲ್ಲಾ ಘಟಕದ ವತಿಯಿಂದ ಈಚೆಗೆ ಆಯೋಜಿಸಿದ್ದ ಪೂನಾ ಒಪ್ಪಂದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ತೆರಿಗೆ ಪಾವತಿಸುವವರು, ಶಿಕ್ಷಣ ಪಡೆದವರು, ಪದವೀಧರರಾಗಿದ್ದವರು, ಒಂದು ಸಾವಿರ ಎಕರೆ ಜಮೀನು ಹೊಂದಿದವರಿಗೆ ಮಾತ್ರ ಮತದಾನದಲ್ಲಿ ಪಾಲ್ಗೊಳ್ಳುವ ಹಕ್ಕು ನೀಡಲಾಗಿತ್ತು. ಎಲ್ಲರಿಗೂ ವೋಟಿನ ಹಕ್ಕು ಕೊಡಿಸಿದ ಕೀರ್ತಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ ಎಂದರು.

ADVERTISEMENT

ಬಿಎಸ್‌ಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ.ಸಿ.ರಂಗಧಾಮಯ್ಯ, ‘24-09-1932ರಲ್ಲಿ ಗಾಂಧಿಜಿ ಮತ್ತು ಬಿ.ಆರ್.ಅಂಬೇಡ್ಕರ್ ನಡುವೆ ಯರವಾಡ ಜೈಲಿನಲ್ಲಿ ಒಂದು ಒಪ್ಪಂದವಾಗುತ್ತದೆ. ಅದೇ ಪೂನಾ ಒಪ್ಪಂದ’ ಎಂದು ಹೇಳಿದರು.

ಜಿಲ್ಲಾ ಅಧ್ಯಕ್ಷ ಜೆ.ಎನ್.ರಾಜಸಿಂಹ, ‘ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿದ್ದ ಮಾಯಾವತಿ ಅವರು ಅಲ್ಲಿನ ಭೂರಹಿತರಿಗೆ ಜಮೀನು ಹಂಚಿದರು. 50 ಸಾವಿರ ಪೌರ
ಕಾರ್ಮಿಕರನ್ನು ಕಾಯಂ ಮಾಡಿದರು. ಬ್ಯಾಕ್‍ಲಾಗ್ ಹುದ್ದೆಗಳನ್ನು ತುಂಬಿದರು’ ಎಂದು ನೆನಪು ಮಾಡಿಕೊಂಡರು.

ಮುಖಂಡ ರುದ್ರಪ್ಪ, ‘ನಾವು ಎರಡು ರೀತಿಯ ಭಾರತ ಕಾಣುತ್ತೇವೆ. ಒಂದು ಬಹಿಷ್ಕೃತ ಭಾರತ. ಇನ್ನೊಂದು ಒಳಗೆ ಇರುವ ಭಾರತ. ಬಹಿಷ್ಕೃತ ಭಾರತದಲ್ಲಿ ಎಲ್ಲರೂ ಗುಲಾಮರೇ ಆಗಿದ್ದರು. ದೌರ್ಜನ್ಯ, ದಬ್ಬಾಳಿಕೆ, ಶೋಷಣೆಹೋಗಲಾಡಿಸಿ ಬಹಳ ಮುಖ್ಯವಾದ ರಾಜಕೀಯ ಅಧಿಕಾರ, ರಾಜಕೀಯ ಪಕ್ಷಗಳ ಸ್ಥಾಪನೆ ಮಾಡಿಕೊಳ್ಳುವ, ವೋಟು ಹಾಕುವ ಅಧಿಕಾರವನ್ನು ಬಿ.ಆರ್.ಅಂಬೇಡ್ಕರ್ ತಂದುಕೊಟ್ಟರು’ ಎಂದು ತಿಳಿಸಿದರು.

ಬಿಎಸ್‌ಪಿ ಜಿಲ್ಲಾ ಕಾರ್ಯದರ್ಶಿ
ಗಳಾದ ಕುಣಿಗಲ್‌ ಪ್ರಕಾಶ್, ಶಿರಾ ಜಿ.ಎಸ್‌.ಮಂಜುನಾಥ್, ಪಾವಗಡ
ಹರೀಶ್, ಶಿವಕುಮಾರ್ ಬೆಲ್ಲದಮಡು, ತಾಲ್ಲೂಕು ಘಟಕಗಳ ಅಧ್ಯಕ್ಷರಾದ ಮಂಗಳವಾಡ ಹನುಮಂತರಾಯಪ್ಪ, ವೀರಕ್ಯಾತಯ್ಯ, ಜಟ್ಟಿಅಗ್ರಹಾರ ನಾಗ
ರಾಜು, ಪಾವಗಡ ವೆಂಕಟರಮಣಪ್ಪ, ಸಣ್ಣಭೂತಣ್ಣ, ಮಂಜುನಾಥ್, ತಿಪ್ಪೇ
ಸ್ವಾಮಿ, ಅಶ್ವಥ್‍ನಾರಾಯಣ್, ಚಿಕ್ಕಣ್ಣ, ಸಿದ್ಧಲಿಂಗಯ್ಯ, ಹನುಮಂತರಾಜು, ಶಿವಣ್ಣ, ಪ್ರಕಾಶ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.