ತುಮಕೂರು ಜೆಡಿಎಸ್ ಕಚೇರಿಯಲ್ಲಿ ಸೋಮವಾರ ಡಾ.ಬಿ.ಆರ್.ಅಂಬೇಡ್ಕರ್, ಡಾ.ಬಾಬು ಜಗಜೀವನರಾಂ ಜಯಂತಿ ಆಚರಿಸಲಾಯಿತು. ಜೆಡಿಎಸ್ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು, ಮುಖಂಡರಾದ ಎ.ಎಸ್.ಡಿ.ಕೃಷ್ಣಪ್ಪ, ಸೋಲಾರ್ ಕೃಷ್ಣಮೂರ್ತಿ ಮೊದಲಾದವರು ಭಾಗವಹಿಸಿದ್ದರು.
ತುಮಕೂರು: ಡಾ.ಬಿ.ಆರ್.ಅಂಬೇಡ್ಕರ್ ರಚನೆಯ ಸಂವಿಧಾನ ಎಲ್ಲರು ಸಮಾನವಾಗಿ, ಸ್ವಾಭಿಮಾನದಿಂದ ಬದುಕಲು ಅವಕಾಶ ಕಲ್ಪಿಸಿದೆ ಎಂದು ಜೆಡಿಎಸ್ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು ಹೇಳಿದರು.
ನಗರದ ಜೆಡಿಎಸ್ ಕಚೇರಿಯಲ್ಲಿ ಸೋಮವಾರ ನಡೆದ ಡಾ.ಬಿ.ಆರ್.ಅಂಬೇಡ್ಕರ್, ಡಾ.ಬಾಬು ಜಗಜೀವನರಾಂ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರತಿಯೊಬ್ಬರು ಸಂವಿಧಾನ ಓದಿ ತಿಳಿದುಕೊಳ್ಳಬೇಕು. ಅದರ ಆಶಯ ಪಾಲಿಸಬೇಕು ಎಂದು ಸಲಹೆ ಮಾಡಿದರು.
ಜೆಡಿಎಸ್ ಎಸ್.ಸಿ.ಘಟಕದ ಜಿಲ್ಲಾ ಅಧ್ಯಕ್ಷ ಎ.ಎಸ್.ಡಿ.ಕೃಷ್ಣಪ್ಪ, ‘ಅಂಬೇಡ್ಕರ್, ಜಗಜೀವನರಾಂ ಉದಯಿಸದಿದ್ದರೆ, ಈ ದೇಶದ ಶೋಷಿತರ ಬದುಕು ಮತ್ತಷ್ಟು ಹೀನಾಯವಾಗುತ್ತಿತ್ತು. ಅಂಬೇಡ್ಕರ್ ಸಂವಿಧಾನ ರಚಿಸಿದರೆ, ಜಗಜೀವನರಾಂ ಅವರು ತಮ್ಮ ಅಧಿಕಾರಾವಧಿಯಲ್ಲಿ ಸಂವಿಧಾನದ ಆಶಯ ಅನುಷ್ಠಾನಗೊಳಿಸಲು ಪ್ರಯತ್ನಿಸಿದರು. ದೇಶದ ಸಾಮಾಜಿಕ ಬದಲಾವಣೆಗೆ ಇಬ್ಬರ ಕೊಡುಗೆ ಅಪಾರ’ ಎಂದರು.
ಮುಖಂಡರಾದ ಸೋಲಾರ್ ಕೃಷ್ಣಮೂರ್ತಿ, ಯೋಗಾನಂದಕುಮಾರ್, ತಾಹೇರಾ ಕುಲ್ಸಂ, ಮುನಿರಾಜು, ಗೋವಿಂದರಾಜು, ಭೈರೇಶ್, ಕೆಂಪರಾಜು, ಮುದಿಮಡು ರಂಗಶಾಮಯ್ಯ, ಧರಣೇಂದ್ರಕುಮಾರ್, ಲಕ್ಷ್ಮಿನರಸಿಂಹರಾಜು, ಕುಸುಮಾ ಜಗನ್ನಾಥ್, ಪುನಿತ್‍ಗೌಡ, ದೊಡ್ಡೇರಿ ಬಸವರಾಜು, ವಿಶ್ವೇಶ್ವರಯ್ಯ, ಲೀಲಾವತಿ, ಮಧು, ಜಯಲಕ್ಷ್ಮಮ್ಮ, ನಾಗರಾಜು, ಹನುಮಂತರಾಜು ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.