ADVERTISEMENT

ದಸೂಡಿ: ಇಂದಿನಿಂದ ಆಂಜನೇಯ ಸ್ವಾಮಿ ಜಾತ್ರಾ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2023, 5:59 IST
Last Updated 29 ಮಾರ್ಚ್ 2023, 5:59 IST
ದಸೂಡಿ ಆಂಜನೇಯ ಸ್ವಾಮಿ
ದಸೂಡಿ ಆಂಜನೇಯ ಸ್ವಾಮಿ   

ಹುಳಿಯಾರು: ಹೋಬಳಿಯ ದಸೂಡಿ ಗ್ರಾಮದ ಆಂಜನೇಯ ಸ್ವಾಮಿ ಜಾತ್ರಾ ಮಹೋತ್ಸವ ಇದೇ 29ರಿಂದ ಏ. 7ರವರೆಗೆ ನಡೆಯಲಿದೆ.

ಮಾರ್ಚ್‌ 29ರಂದು ಅಡ್ಡಪಲ್ಲಕ್ಕಿ ಉತ್ಸವ, ಸರ್ಪ ವಾಹನೋತ್ಸವ ನಡೆಯಲಿದೆ. 30ರಂದು ರಾಮೋತ್ಸವ, ಪಾನಕ ಸೇವೆ, ಇಂದ್ರಜಿತು ವಾಹನೋತ್ಸವವಿದೆ.

31ರಂದು ಅಭಿಷೇಕ, ಸಹಸ್ರನಾಮ, ನೂರೊಂದೆಡೆ ಸೇವೆ, ಸಂಜೆ ಗೌಡಗೆರೆ ದುರ್ಗಮ್ಮ ದೇವಿಯ ಆಗಮನ ಕಾರ್ಯಕ್ರಮವಿದೆ.

ADVERTISEMENT

ಏ. 1ರಂದು ಸ್ವಾಮಿಯ ಪುರ ಪ್ರವೇಶ, ಗಜ ವಾಹನೋತ್ಸವ, 2ರಂದು ಬ್ರಹ್ಮ ರಥೋತ್ಸವ, ರಾತ್ರಿ ‘ಗುರು ತಿಪ್ಪೇರುದ್ರಸ್ವಾಮಿ’ ಭಕ್ತಿ ಪ್ರಧಾನ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ.

3ರಂದು ಕೊಠಾರೋತ್ಸವ, 4ರಂದು ಹಾಲು ಪಲ್ಲಕ್ಕಿ ಉತ್ಸವ ಹಮ್ಮಿಕೊಳ್ಳಲಾಗಿದೆ. 5ರಂದು ಮುತ್ತಿನ ಪಲ್ಲಕ್ಕಿ ಉತ್ಸವ, 6ರಂದು ಪುಷ್ಪ ವಾಹನೋತ್ಸವ, 7ರಂದು ನವಿಲು ವಾಹನೋತ್ಸವ ನಡೆಯಲಿದೆ ಎಂದು ದೇಗುಲ ಜೀರ್ಣೋದ್ಧಾರ ಸಮಿತಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.