ADVERTISEMENT

ಲಸಿಕೆ ಪಡೆದ ಮತ್ತೊಂದು ಶಿಶು ಸಾವು: ಕುಣಿಗಲ್‌ ತಾಲ್ಲೂಕಿನಲ್ಲೇ ಎರಡನೇ ಪ್ರಕರಣ

​ಪ್ರಜಾವಾಣಿ ವಾರ್ತೆ
Published 4 ಜನವರಿ 2025, 23:30 IST
Last Updated 4 ಜನವರಿ 2025, 23:30 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

– ಐಸ್ಟಾಕ್ ಚಿತ್ರ

ಕುಣಿಗಲ್ (ತುಮಕೂರು): ನಗರದ ಆರೋಗ್ಯ ಕೇಂದ್ರದಲ್ಲಿ ಲಸಿಕೆ (ಪೆಂಟಾವಲೆಂಟ್‌ ವ್ಯಾಕ್ಸಿನ್‌) ಪಡೆದ ಎರಡು ತಿಂಗಳ ಹೆಣ್ಣು ಮಗು ಶುಕ್ರವಾರ ರಾತ್ರಿ ಮೃತಪಟ್ಟಿದೆ.

ADVERTISEMENT

ಕುಣಿಗಲ್‌ ಹೊಸ ಬಡಾವಣೆಯ ವಿನೋದ್ ಮತ್ತು ರಂಜಿತಾ ದಂಪತಿಯ ಎರಡು ತಿಂಗಳ ಹೆಣ್ಣು ಮಗು ಯಶಿಕಾಗೆ ಕೋಟೆ ಪ್ರದೇಶದ ನಗರ ಆರೋಗ್ಯ ಕೇಂದ್ರದಲ್ಲಿ ಗುರುವಾರ ಲಸಿಕೆ ಹಾಕಲಾಗಿತ್ತು.

ತಾಲ್ಲೂಕಿನ ಭಕ್ತರಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುರುವಾರ ಲಸಿಕೆ ಪಡೆದ ಎರಡೂವರೆ ತಿಂಗಳ ಗಂಡು ಮಗು ಕೂಡ ಶುಕ್ರವಾರ ಮೃತಪಟ್ಟಿತ್ತು. ಇದುವರೆಗೆ ತಾಲ್ಲೂಕಿನಲ್ಲಿ ಪೆಂಟಾವಲೆಂಟ್‌ ಲಸಿಕೆ ಪಡೆದ ಎರಡು ಮಕ್ಕಳು ಮೃತಪಟ್ಟಂತಾಗಿದೆ.    

ಎರಡು ಪ್ರಕರಣ ವರದಿಯಾದ ಬೆನ್ನಲ್ಲೇ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದ ರಾಜ್ಯ ನೋಡಲ್‌ ಅಧಿಕಾರಿಗಳು ಶನಿವಾರ ಎರಡೂ ಆಸ್ಪತ್ರೆಗಳಿಗೆ ಭೇಟಿ ನೀಡಿ ಲಸಿಕೆಯ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. 

ಚುಚ್ಚುಮದ್ದಿನ ಮೂಲಕ ಮಕ್ಕಳಿಗೆ ನೀಡುವ ಪೆಂಟಾವಲೆಂಟ್ ಲಸಿಕೆ ಐದು ರೋಗಗಳನ್ನು ತಡೆಗಟ್ಟಲು ನೆರವಾಗುತ್ತದೆ. 

‘ಶುಕ್ರವಾರ ಮಗುವಿನ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂತು. ಸ್ಥಳೀಯ ಮಕ್ಕಳ ತಜ್ಞರ ಸಲಹೆ ಮೇರೆಗೆ ಮಗುವನ್ನು ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸುವ ಸಮಯದಲ್ಲಿ ಮಗು ಮೃತಪಟ್ಟಿತು. ಕುಣಿಗಲ್‌ ನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಿಗೆ ಮಾಹಿತಿ ನೀಡಿ ಶನಿವಾರ ಬೆಳಗ್ಗೆ ಮಗುವಿನ ಅಂತ್ಯಕ್ರಿಯೆ ನೆರವೇರಿಸಲಾಯಿತು’ ಎಂದು ಪೋಷಕರು ತಿಳಿಸಿದ್ದಾರೆ.

ಲಸಿಕಾ ಕಾರ್ಯಕ್ರಮದ ರಾಜ್ಯ ನೋಡಲ್ ಅಧಿಕಾರಿ ಡಾ.ಸುಧೀರ್‌ ನಾಯಕ್, ಜಿಲ್ಲಾ ನೋಡಲ್ ಅಧಿಕಾರಿ ಡಾ.ಮೋಹನ್ ಮತ್ತು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಮರಿಯಪ್ಪ ತಂಡ ನಗರ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿತು. ಪ್ರಯೋಗಾಲಯದ ವರದಿ ಕೈಸೇರಿದ ನಂತರ ನಿಖರ ಕಾರಣ ಗೊತ್ತಾಗಲಿದೆ ಎಂದು ತಂಡ ಹೇಳಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.