ADVERTISEMENT

ಲಂಬಾಣಿಗರಿಂದ ಪತ್ರ ಚಳವಳಿ

ಪಾವಗಡ: ಮೀಸಲಾತಿ ಮುಂದುವರಿಸಲು ಆಗ್ರಹ– ಮುಖ್ಯಮಂತ್ರಿಗೆ ಪತ್ರ

​ಪ್ರಜಾವಾಣಿ ವಾರ್ತೆ
Published 3 ಜೂನ್ 2020, 16:53 IST
Last Updated 3 ಜೂನ್ 2020, 16:53 IST
ಪಾವಗಡದಲ್ಲಿ ಬುಧವಾರ ಗೋರ್ ಸೀಕವಾಡಿ ಸಾಮಾಜಿಕ ಚಳವಳಿ, ಗೋರ್ ಸೇನಾ ಪದಾಧಿಕಾರಿಗಳು ಬಂಜಾರ, ಭೋವಿ, ಕೊರಮ, ಕೊರಚ ಸಮುದಾಯಗಳಿಗೆ ಮೀಸಲಾತಿ ಮುಂದುವರಿಸುವಂತೆ ಒತ್ತಾಯಿಸಿ ಪತ್ರ ಚಳವಳಿ ಆರಂಭಿಸಿದರು
ಪಾವಗಡದಲ್ಲಿ ಬುಧವಾರ ಗೋರ್ ಸೀಕವಾಡಿ ಸಾಮಾಜಿಕ ಚಳವಳಿ, ಗೋರ್ ಸೇನಾ ಪದಾಧಿಕಾರಿಗಳು ಬಂಜಾರ, ಭೋವಿ, ಕೊರಮ, ಕೊರಚ ಸಮುದಾಯಗಳಿಗೆ ಮೀಸಲಾತಿ ಮುಂದುವರಿಸುವಂತೆ ಒತ್ತಾಯಿಸಿ ಪತ್ರ ಚಳವಳಿ ಆರಂಭಿಸಿದರು   

ಪಾವಗಡ: ಬಂಜಾರ, ಭೋವಿ, ಕೊರಮ, ಕೊರಚ ಸಮುದಾಯ ಗಳನ್ನು ಪರಿಶಿಷ್ಟ ಜಾತಿಯಲ್ಲಿಯೇ ಮುಂದುವರಿಸಬೇಕು ಎಂದು ಒತ್ತಾಯಿಸಿ ಬುಧವಾರ ಪಟ್ಟಣದಲ್ಲಿ ಗೋರ್ ಸೀಕವಾಡಿ ಸಾಮಾಜಿಕ ಚಳವಳಿ, ಗೋರ್ ಸೇನಾ ಪದಾಧಿಕಾರಿ ಗಳು ಪತ್ರ ಚಳವಳಿ ಆರಂಭಿಸಿದರು.

ಗೋರ್ ಸೀಕವಾಡಿ ಸಾಮಾಜಿಕ ಚಳವಳಿ ಜಿಲ್ಲಾ ಘಟಕದ ಸಂಯೋಜಕ ಚನ್ನಕೇಶವ ಪವಾರ್ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಪರಿಶಿಷ್ಟ ಜಾತಿಯಿಂದ ಬಂಜಾರ (ಲಂಬಾಣಿ), ಭೋವಿ, ಕೊರಮ, ಕೊರಚ ಜಾತಿಗಳನ್ನು ತೆಗೆಯಬೇಕೆಂದು ಕೆಲ ಕಿಡಿಗೇಡಿಗಳು ಒತ್ತಾಯಿಸುತ್ತಿದ್ದಾರೆ. ಈ ಜಾತಿಗಳ ಮೀಸಲಾತಿ ಭಿಕ್ಷೆಯಲ್ಲ. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಮುದಾಯಗಳಿಗೆ ಮೂಲ ಸಂವಿಧಾನದಲ್ಲಿ ನೀಡಿರುವ ಸಂವಿಧಾನಬದ್ಧ ಹಕ್ಕು ಎಂದು ಮುಖ್ಯಮಂತ್ರಿಗೆ ಪತ್ರ ಚಳವಳಿ ನಡೆಸಲಾಗುವುದು ಎಂದರು.

ಜೂನ್ 10ರಂದು ತಾಲ್ಲೂಕಿನ ಪ್ರತಿ ತಾಂಡಾದಿಂದ 500 ಪತ್ರಗಳನ್ನು ಮುಖ್ಯಮಂತ್ರಿಗೆ ಕಳುಹಿಸಲಾಗುವುದು ಎಂದು ತಿಳಿಸಿದರು.

ADVERTISEMENT

ಸಮುದಾಯಗಳನ್ನು ಪರಿಶಿಷ್ಟ ಜಾತಿಯಲ್ಲಿಯೇ ಮಂದು ವರೆಸಿ ಸಮಾಜದ ಸ್ವಾಸ್ಥ್ಯ ಹದಗೆಡಿಸು ತ್ತಿರುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಮನವಿ ಮಾಡಲಾಗುವುದು ಎಂದರು.

ಗೋರ್ ಸೇನಾ ಗೌರವಾಧ್ಯಕ್ಷ ಗೋವಿಂದ ನಾಯ್ಕ, ಅರುಣ್ ಕುಮಾರ್ ನಾಯ್ಕ, ಸತೀಶನಾಯ್ಕ, ನಂದೀಶನಾಯ್ಕ, ಜಗದೀಶ ನಾಯ್ಕ, ಜಯಕುಮಾರ್ ನಾಯ್ಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.