ಪ್ರಾತಿನಿಧಿಕ ಚಿತ್ರ
ತಿಪಟೂರು: ರಂಗಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಳ್ಳಿ ಗ್ರಾಮದ ಅಣ್ಣಯ್ಯ ನಗರದ ಬಳಿ ಭಾನುವಾರ ಸಂಜೆ ಬೈಕ್ ವಿಲ್ಹಿಂಗ್‌ನಿಂದಾಗಿ ಮೂರು ಮೇಕೆ, ಏಳು ಕುರಿ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳದಲ್ಲಿ ಎರಡು ಮೇಕೆ ಸಾವನ್ನಪ್ಪಿದೆ.
ಕುರಿ, ಆಡು ಮತ್ತು ಮೇಕೆ ಮೇಯಿಸಿಕೊಂಡು ಮನೆಕಡೆ ಹೋಗುತ್ತಿದ್ದ ಕುರಿಗಾಹಿ ಕಾಳೇಗೌಡ ಎಂಬುವವರ ಕುರಿಗಳ ಮೇಲೆ ನಗರ ಪ್ರದೇಶದಿಂದ ಮೂವರು ಯುವಕರು ಒಂದೇ ದ್ವಿಚಕ್ರ ವಾಹನದಲ್ಲಿ ಬಂದು ಬೈಕ್ ವೀಲಿ ನಡೆಸಿ ಕುರಿಗಳ ಸಾವಿಗೆ ಕಾರಣವಾಗಿದ್ದಾರೆ.
ಸ್ಥಳೀಯರ ಮಾಹಿತಿಯಂತೆ, ಬೈಕ್ ಸವಾರರು ಅತಿವೇಗದಲ್ಲಿ ಬಂದು ವೀಲಿ ನಡೆಸಿದಾಗ ಅಪಘಾತ ಸಂಭವಿಸಿದೆ. ಇಂತಹ ಘಟನೆ ತಡೆಗೆ ಪೊಲೀಸ್ ಇಲಾಖೆ ಗಸ್ತು ಹೆಚ್ಚಿಸಬೇಕು. ಬೈಕ್ ಚಾಲಕರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.