ADVERTISEMENT

ಲಿಂಗಾಯತ ಧರ್ಮಕ್ಕೆ ಸಂವಿಧಾನ ರಚಿಸಿದ ಚನ್ನಬಸವಣ್ಣ

ಚನ್ನಬಸವಣ್ಣ ಜಯಂತಿಯಲ್ಲಿ ಡಾ.ಡಿ.ಎನ್.ಯೋಗೀಶ್ವರಪ್ಪ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2018, 14:25 IST
Last Updated 7 ನವೆಂಬರ್ 2018, 14:25 IST
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಬಸವಕೇಂದ್ರದ ಕಾರ್ಯಕರ್ತೆ ಶಿವಲಿಂಗಮ್ಮ ಹಾಗೂ ಕದಳಿ ವೇದಿಕೆ ಉಪಾಧ್ಯಕ್ಷೆ ನಾಗರತ್ನಮ್ಮ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಚಿತ್ರದಲ್ಲಿ ಡಾ.ಡಿ.ಎನ್.ಯೋಗೀಶ್ವರಪ್ಪ, ಅಧ್ಯಕ್ಷೆ ಸಿದ್ಧಗಂಗಮ್ಮ, ಕಾರ್ಯದರ್ಶಿ ಚಂದ್ರಶೇಖರ್, ಪ್ರೊ.ಅಮೃತಕುಮಾರಿ ಮತ್ತು ಪುಷ್ಪಾವತಿ ಇದ್ದಾರೆ

ತುಮಕೂರು: 12ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು ಪರಿಷ್ಕರಿಸಿ ಷಟ್‌ಸ್ಥಲ ಸಂಪ್ರದಾಯಕ್ಕೆ ನೆಲೆ ಕಲ್ಪಿಸಿ ಲಿಂಗಾಯತ ಧರ್ಮಕ್ಕೆ ಧಾರ್ಮಿಕ ಸಂವಿಧಾನವನ್ನು ರಚಿಸಿದ ಕೀರ್ತಿ ಶರಣ ಚನ್ನಬಸವಣ್ಣ ಅವರಿಗೆ ಸಲ್ಲುತ್ತದೆ ಎಂದು ಸಂಶೋಧಕ ಡಾ.ಡಿ.ಎನ್.ಯೋಗೀಶ್ವರಪ್ಪ ನುಡಿದರು.

ನಗರದ ಬಸವಕೇಂದ್ರ ಜಯದೇವ ವಿದ್ಯಾರ್ಥಿನಿಲಯ ಟ್ರಸ್ಟ್‌ ಬಸವ ಮಂಟಪದಲ್ಲಿ ಏರ್ಪಡಿಸಿದ್ದ ‘ಚನ್ನಬಸವಣ್ಣನ ಜಯಂತಿ’ಯಲ್ಲಿ ಉಪನ್ಯಾಸ ನೀಡಿದರು.

‘ಅವಿರಳ ಜ್ಞಾನಿ, ದಿವ್ಯಗುಣಸಂಪನ್ನ, ಷಟ್‌ಸ್ಥಲ ಸ್ಥಾಪನಾಚಾರ್ಯನೆಂದು ಖ್ಯಾತನಾದ ಚನ್ನಬಸವಣ್ಣ ಅನುಭವ ಮಂಟಪದ ಕಾರ್ಯಕಲಾಪಗಳ ಕಾರ್ಯದರ್ಶಿಯಾಗಿದ್ದರು. ತನಗಿಂತ ಹಿರಿಯನಾದ ಶಿವಯೋಗಿ ಸಿದ್ಧರಾಮೇಶ್ವರರಿಗೆ ಲಿಂಗದೀಕ್ಷೆ ಮಾಡಿದ ಮಹಾಮಹಿಮ’ ಎಂದರು.

ADVERTISEMENT

ಚನ್ನಬಸವಣ್ಣ ಶಿವಪಥದ ಆಚಾರ್ಯರಾಗಿದ್ದಂತೆಯೇ ಉತ್ತಮ ರಾಜನೀತಿಜ್ಞರಾಗಿದ್ದರು. ಅಲ್ಲಮಪ್ರಭುವಿನ ನಂತರ ಶೂನ್ಯ ಪೀಠದ ಅಧ್ಯಕ್ಷರಾದರು. ಅಷ್ಟಾವರಣ, ಪಂಚಾಚಾರ, ಷಟ್‌ಸ್ಥಲ ಮೊದಲಾದ ಮತ ಪ್ರಕ್ರಿಯೆಗಳನ್ನು ರೂಪಿಸಿದರು. ಅವರ ವಚನಗಳು ಅವರಲ್ಲಿ ಹುದುಗಿದ್ದ ಅಧ್ಯಾತ್ಮ ಶಕ್ತಿಯನ್ನು ತೋರಿಸುತ್ತವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.