ADVERTISEMENT

ಚಿಕ್ಕನಾಯಕನಹಳ್ಳಿ: ಮದಲಿಂಗನ ಕಣಿವೆ ವೀಕ್ಷಣಾ ಗೋಪುರ ಶಿಥಿಲ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2024, 6:33 IST
Last Updated 11 ಸೆಪ್ಟೆಂಬರ್ 2024, 6:33 IST
ಹಾನಿಗೊಳಗಾಗಿರುವ ಮದಲಿಂಗನ ಕಣಿವೆ ಸಾರ್ವಜನಿಕ ವೀಕ್ಷಣಾ ಗೋಪುರದ ಒಳಭಾಗ
ಹಾನಿಗೊಳಗಾಗಿರುವ ಮದಲಿಂಗನ ಕಣಿವೆ ಸಾರ್ವಜನಿಕ ವೀಕ್ಷಣಾ ಗೋಪುರದ ಒಳಭಾಗ   

ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಮದಲಿಂಗನ ಕಣಿವೆ ಅರಣ್ಯ ಪ್ರದೇಶದ ಸಾರ್ವಜನಿಕ ವೀಕ್ಷಣಾ ಗೋಪುರ ಶಿಥಿಲಗೊಂಡಿದೆ.

ಪಟ್ಟಣದ ಸಮೀಪವೇ ಇರುವ ಮದಲಿಂಗನ ಕಣಿವೆಯಲ್ಲಿ ಪ್ರವಾಸಿಗರು ಹಾಗೂ ಸಾರ್ವಜನಿಕರು ಪ್ರಕೃತಿ ಸೊಬಗನ್ನು ವೀಕ್ಷಿಸುವ ಅನುಕೂಲಕ್ಕಾಗಿ ನಿರ್ಮಿಸಲಾಗಿದ್ದ ಕಬ್ಬಿಣದ ವೀಕ್ಷಣಾ ಗೋಪುರದ ಒಳಭಾಗ ತುಕ್ಕು ಹಿಡಿದು ಹಾನಿಗೊಳಗಾಗಿ ಮುರಿದುಬಿದ್ದಿದೆ.

ವೀಕ್ಷಣಾ ಗೋಪುರದ ಒಳಭಾಗದಲ್ಲಿ ಮಳೆ ನೀರು ಸಂಗ್ರಹವಾಗಿ, ಕಬ್ಬಿಣ ತುಕ್ಕು ಹಿಡಿದು ಶಿಥಿಲಾವಸ್ಥೆಗೆ ತಲುಪಿ ಅದು ಮುರಿದುಕೊಂಡು ಬಿದ್ದಿರುವಂತೆ ಕಾಣುತ್ತಿದೆ. ಗೋಪುರದ ಒಳಗಡೆ ಮಳೆ ನೀರು ಸಂಗ್ರಹವಾಗದೆ ಸರಾಗವಾಗಿ ಹರಿದು ಹೋಗಲು ಅದಕ್ಕೆ ದಾರಿ ಮಾಡಿಕೊಡದಿರುವುದೇ ಇದಕ್ಕೆ ಕಾರಣ ಎಂದು ಪರಿಸರ ಪ್ರೇಮಿಗಳು ಹಾಗೂ ಪಕ್ಷಿ ವೀಕ್ಷಕ ತಜ್ಞರು ದೂರುತ್ತಾರೆ.

ADVERTISEMENT

ಅವೈಜ್ಞಾನಿಕ ಕಾಮಗಾರಿಯನ್ನು ಪ್ರಾರಂಭದಲ್ಲೇ ಪರಿಶೀಲಿಸಿ ಅದರ ಬಗ್ಗೆ ಎಚ್ಚರ ವಹಿಸದಿರುವುದು ಮತ್ತು ತುಕ್ಕು ಹಿಡಿದ ಗೋಪುರ ಸಂಪೂರ್ಣ ಹಾನಿಗೊಳಗಾಗುವವರೆಗೂ ಅದರ ಬಗ್ಗೆ ನಿಗಾ ವಹಿಸದೇ ಇಲಾಖೆ ನಿರ್ಲಕ್ಷ್ಯ ತೋರಿದೆ ಎಂದು ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸದ್ದಾರೆ.

ಮದಲಿಂಗನ ಕಣಿವೆ ಸುತ್ತಲ ಗುಡ್ಡಗಾಡು ಅರಣ್ಯ
ಅರೆ-ಮಲೆನಾಡು ಲಕ್ಷಣಗಳುಳ್ಳ ಗುಡ್ಡಗಾಡು ಅರಣ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.