ಶಿರಾ: ತಾಲ್ಲೂಕಿನ ಬುಕ್ಕಾಪಟ್ಟಣ ಸರ್ಕಾರಿ ಪ್ರೌಢಶಾಲೆಯಲ್ಲಿ ₹67 ಲಕ್ಷ ವೆಚ್ಚದಲ್ಲಿ ನಾಲ್ಕು ಕೊಠಡಿ ನಿರ್ಮಾಣಕ್ಕೆ ಭೂಮಿಪೂಜೆ ನಡೆಸಲಾಯಿತು.
ಅಮೆರಿಕದ ಸಂಸ್ಥೆಯೊಂದರ ಉದ್ಯೋಗಿಯಾಗಿರುವ ಬುಕ್ಕಾಪಟ್ಟಣದ ಕೋದಂಡರಾಮ ಶೆಟ್ಟರ ಪುತ್ರ ನಿರಂಜನ್ ಅವರು ಓಸಾಟ್ ಸರ್ಕಾರೇತರ ಸ್ವಯಂಸೇವಾ ಸಂಸ್ಥೆ ಸಹಯೋಗದೊಂದಿಗೆ ಕಟ್ಟಡ ನಿರ್ಮಿಸುತ್ತಿದ್ದಾರೆ.
ಓಸಾಟ್ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಪ್ರಸಾದ್ ಮಾತನಾಡಿ, ‘ಒಂದು ದಶಕದಲ್ಲಿ ನಮ್ಮ ಸಂಸ್ಥೆ ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ 119 ಶಾಲೆಗಳಲ್ಲಿ ಸುಸಜ್ಜಿತ ಕೊಠಡಿ ನಿರ್ಮಿಸಿ ಕಲಿಕಾ ಮಟ್ಟ ಸುಧಾರಿಸಿದೆ. ಇದು 120ನೇ ಶಾಲೆಯಾಗಿದ್ದು, ನಾಲ್ಕು ಕೊಠಡಿಗಳನ್ನು ನಿರ್ಮಿಸಿ ಕಲಿಕೆಗೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಿಕೊಡಲಾಗುವುದು’ ಎಂದರು.
ಓಸಾಟ್ ಸಂಸ್ಥೆಯ ಮಂಜುನಾಥ್, ಶ್ರೀನಿವಾಸ್, ದಾನಿಗಳಾದ ನಿರಂಜನ್ ಅವರ ಸಹೋದರ ಮಹೇಶ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕಿಶನ್ ಕುಮಾರ್, ತಾ.ಪಂ ಮಾಜಿ ಅಧ್ಯಕ್ಷ ಬಿ.ಆರ್.ಮಂಜುನಾಥ್, ಸತ್ಯನಾರಾಯಣ, ಮುದ್ದುಗಣೇಶ್, ಮುಖ್ಯ ಶಿಕ್ಷಕ ಜೈನುಲಾಬ್ಧಿನ್ ಖಾಜಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಮುಜಾಯಿದ್, ಸದಸ್ಯರಾದ ಕಾಂತರಾಜು ಬಿ.ಎಂ, ದಿವಾಕರ್, ಗಂಗರಾಜು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.