ವೈ.ಎನ್.ಹೊಸಕೋಟೆ: ಗ್ರಾಮದಲ್ಲಿ ಖೋಟಾನೋಟು ಮುದ್ರಿಸಿ ಚಲಾವಣೆ ಮಾಡುತ್ತಿದ್ದ ಇಬ್ಬರನ್ನು ಪೋಲೀಸರು ಬಂದಿಸಿದ್ದಾರೆ.
ಗ್ರಾಮದ ಶಿವಕುಮಾರ್ (32), ಶ್ರೀನಿವಾಸ್ (50) ಬಂಧಿತರು. ಮಾಧ್ಯಮದವರ ಮಾಹಿತಿಯ ಮೇರೆಗೆ ಆರೋಪಿಗಳನ್ನು ಪೋಲೀಸರು ಬೆನ್ನೆತ್ತಿದಾಗ ಗ್ರಾಮದ ಹೊರವಲಯದ ಆರ್.ಡಿ.ರೊಪ್ಪ ಗೇಟ್ ಬಳಿ ನೋಟುಗಳ ಬದಲಾವಣೆಗಾಗಿ ಕಾಯುತ್ತಿದ್ದ ವೇಳೆಗೆ ಸಿಕ್ಕಿಬಿದ್ದಿದ್ದಾರೆ.
ವಿಚಾರಣೆಯ ವೇಳೆ ಗ್ರಾಮದ ಹೊಸ ಚೌಡೇಶ್ವರಿ ದೇವಸ್ಥಾನದ ಮುಂಭಾಗದ ರೇಷ್ಮೆ ಸೀರೆ ಕೈಮಗ್ಗ ನೇಕಾರಿಕೆ ಮನೆಯೊಂದರಲ್ಲಿ ಆರೋಪಿ ಶ್ರೀನಿವಾಸ್ ಮುದ್ರಣಯಂತ್ರ ಬಳಸಿ ನೋಟುಗಳ ಮುದ್ರಣ ಮಾಡಲಾಗುತ್ತಿದ್ದ ವಿಷಯ ತಿಳಿದು ಬಂದಿದೆ. ಶೋಧನೆ ನಡೆಸಿದಾಗ ಮನೆಯಲ್ಲಿ ಮುದ್ರಣ ಯಂತ್ರ, ಶಾಯಿ, ಮುದ್ರಣ ಕಾಗದ ಮತ್ತು ಲಕ್ಷಕ್ಕೂ ಹೆಚ್ಚಿನ ಮೌಲ್ಯದ ನಕಲಿ ನೋಟುಗಳು ದೊರೆತಿವೆ. ಈ ದಂಧೆಯಲ್ಲಿ ಭಾಗಿಯಾಗಿ ರುವ ಹಿನ್ನೆಲೆಯಲ್ಲಿ ಶ್ರೀನಿವಾಸನನ್ನು ಬಂಧಿಸಲಾಗಿದೆ.
ಸ್ಥಳಕ್ಕೆ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ, ಡಿವೈಎಸ್‌ಪಿ ಎಂ.ಪ್ರವೀಣಕುಮಾರ್, ಸಿಪಿಐ ವೆಂಕಟೇಶ್ ಮತ್ತು
ಸ್ಥಳೀಯ ಪಿಎಸ್‌ಐ ಬಿ.ರಾಮಯ್ಯ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.