ADVERTISEMENT

ಪ್ರತ್ಯೇಕ ಮಧುಗಿರಿ ಜಿಲ್ಲೆ ರೂಪಿಸಲು ವಿಧಾನಸಭೆಯಲ್ಲಿ ಒತ್ತಾಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಫೆಬ್ರುವರಿ 2020, 8:48 IST
Last Updated 20 ಫೆಬ್ರುವರಿ 2020, 8:48 IST
ಮಧುಗಿರಿ ಶಾಸಕ ವೀರಭದ್ರಯ್ಯ
ಮಧುಗಿರಿ ಶಾಸಕ ವೀರಭದ್ರಯ್ಯ   

ಬೆಂಗಳೂರು: ತುಮಕೂರು ಜಿಲ್ಲೆಯನ್ನು ವಿಭಜಿಸಿ ಪ್ರತ್ಯೇಕ ಮಧುಗಿರಿ ಜಿಲ್ಲೆ ರೂಪಿಸಲು ಸರ್ಕಾರ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಶಾಸಕ ವೀರಭದ್ರಯ್ಯ ಆಗ್ರಹಿಸಿದರು.

ವಿಧಾನಸಭೆಯಲ್ಲಿ ಮಾತನಾಡಿದ ಅವರು, ‘ತುಮಕೂರು ಜಿಲ್ಲೆ ದೊಡ್ಡದಾಗಿದೆ. ಅದನ್ನು ವಿಭಜಿಸಿಮಧುಗಿರಿ ಜಿಲ್ಲೆ ರೂಪಿಸಿದರೆ ಆಡಳಿತ ಮತ್ತು ಅಭಿವೃದ್ಧಿ ಚಟುವಟಿಕೆಗಳ ನಿರ್ವಹಣೆಗೆ ಅನುಕೂಲವಾಗಲಿದೆ’ ಎಂದು ಅಭಿಪ್ರಾಯಪಟ್ಟರು.

ಈ ಹಿಂದೆ ರಾಜ್ಯದ ಹಲವು ದೊಡ್ಡ ಜಿಲ್ಲೆಗಳನ್ನು ವಿಭಜಿಸಿ ಸಣ್ಣ ಜಿಲ್ಲೆಗಳನ್ನು ರೂಪಿಸಿದ್ದನ್ನು ಉಲ್ಲೇಖಿಸಿದ ಅವರು, ಮಧುಗಿರಿ ಭಾಗದ ಜನರು ಹಲವು ವರ್ಷಗಳಿಂದ ಈ ಬೇಡಿಕೆ ಮುಂದಿಟ್ಟಿದ್ದಾರೆ. ಸರ್ಕಾರ ಸ್ಪಂದಿಸಬೇಕು ಎಂದು ಮನವಿ ಮಾಡಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.