ADVERTISEMENT

ಸಮಾಜ ಸೇವಾ ಮನೋಭಾವ ರೂಢಿಸಿಕೊಳ್ಳಿ

ಸಿದ್ಧಾರ್ಥ ತಾಂತ್ರಿಕ ಶಿಕ್ಷಣ ಸಂಸ್ಥೆ: ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಡಾ.ಜಿ.ಪರಮೇಶ್ವರ ವಿದ್ಯಾರ್ಥಿಗಳಿಗೆ ಕಿವಿಮಾತು

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2019, 19:57 IST
Last Updated 2 ಆಗಸ್ಟ್ 2019, 19:57 IST
ಎಸ್‌ಎಸ್‌ಐಟಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಡಾ.ಜಿ.ಪರಮೇಶ್ವರ ಉದ್ಘಾಟಿಸಿದರು. ಶ್ರೀನಿವಾಸ್ ರಾಮಾನುಜಮ್, ಪ್ರೊ.ಗೋಪಾಲನ್ ಜಗದೀಶ್, ಡಾ.ಬಾಲಕೃಷ್ಣ ಶೆಟ್ಟಿ, ಡಾ.ಎಂ.ಕೆ.ವೀರಯ್ಯ ಇತರರಿದ್ದರು
ಎಸ್‌ಎಸ್‌ಐಟಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಡಾ.ಜಿ.ಪರಮೇಶ್ವರ ಉದ್ಘಾಟಿಸಿದರು. ಶ್ರೀನಿವಾಸ್ ರಾಮಾನುಜಮ್, ಪ್ರೊ.ಗೋಪಾಲನ್ ಜಗದೀಶ್, ಡಾ.ಬಾಲಕೃಷ್ಣ ಶೆಟ್ಟಿ, ಡಾ.ಎಂ.ಕೆ.ವೀರಯ್ಯ ಇತರರಿದ್ದರು   

ತುಮಕೂರು: ‘ಸಮಾಜದಲ್ಲಿ ಉತ್ತಮ ನಾಗರೀಕನನ್ನಾಗಿ ಗುರುತಿಸಿಕೊಳ್ಳುವುದರ ಜೊತೆಗೆ ಅದೇ ಸಮಾಜಕ್ಕೆ ಸಾಧ್ಯವಾದಷ್ಟು ಅಳಿಲು ಸೇವೆ ಮಾಡುವ ಮನಸ್ಥಿತಿಯನ್ನು ರೂಢಿಸಿಕೊಳ್ಳಬೇಕು’ ಎಂದು ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಜಿ.ಪರಮೇಶ್ವರ ಹೇಳಿದರು.

ನಗರದ ಸಿದ್ಧಾರ್ಥ ತಾಂತ್ರಿಕ ಶಿಕ್ಷಣ ಸಂಸ್ಥೆಯ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಮಾತನಾಡಿದರು.

ಮಕ್ಕಳ ಉತ್ತಮ ಭವಿಷ್ಯವನ್ನು ನಿರ್ಮಿಸುವಲ್ಲಿ ಪೋಷಕರ ಪಾತ್ರ ಮಹತ್ವದ್ದು, ಅಧ್ಯಯನದ ಸಮಯದಲ್ಲಿ ಪೋಷಕರಿಗೆ, ತಮ್ಮ ಮಕ್ಕಳ ಬೆಳವಣಿಗೆಯ ಬಗ್ಗೆ, ಅವರ ಮುಂದಿನ ಜೀವನದ ಕುರಿತು ಯಾವುದೇ ವಿಷಯದ ಬಗ್ಗೆ ಸಂಶಯ ಮತ್ತು ಸಮಸ್ಯೆ ಇದ್ದರೂ, ಶಿಕ್ಷಕರ ಗಮನಕ್ಕೆ ತನ್ನಿ ಎಂದು ಪೋಷಕರಿಗೆ ಮನವಿ ಮಾಡಿದರು ಹೇಳಿದರು.

ADVERTISEMENT

ಗ್ರಾಮೀಣ ಪ್ರದೇಶದ ಕೆಳ ವರ್ಗದ ಮಕ್ಕಳು ಉನ್ನತ ಶಿಕ್ಷಣವನ್ನು ಪಡೆಯಬೇಕು ಎಂಬ ಉದ್ದೇಶದಿಂದ ನಮ್ಮ ತಂದೆ ಗಂಗಾಧರಯ್ಯನವರು ಶಿಕ್ಷಣಕ್ಕೆ ಹೆಚ್ಚಿನ ಮಹತ್ವವನ್ನು ನೀಡಿದ್ದರು ಎಂದು ಸ್ಮರಿಸಿದರು.

ಬೆಂಗಳೂರಿನ ಏರೋಸ್ಪೇಸ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಪ್ರೊ.ಗೋಪಾಲನ್ ಜಗದೀಶ್ ಮಾತನಾಡಿ, ‘ಜೀವನದಲ್ಲಿ ಯಶಸ್ಸು ಸಾಧಿಸಬೇಕಾದರೆ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಿ. ಪ್ರಮುಖವಾಗಿ ತಂದೆ ತಾಯಿಯರನ್ನು ಗೌರವದಿಂದ ಕಾಣಿ. ಒಳ್ಳೆಯ ಸ್ನೇಹಿತರನ್ನು ಸಂಪಾದಿಸಿ ಎಂದು ಸಲಹೆ ನೀಡಿದರು.

ಬೆಂಗಳೂರಿನ ಟಾಟಾ ಕನ್ಸಲ್ಟೆನ್ಸಿ ಮುಖ್ಯಸ್ಥ ಶ್ರೀನಿವಾಸ್ ರಾಮಾನುಜಮ್ ಮಾತನಾಡಿ, ‘ಜೀವನದಲ್ಲಿ ನೀವೊಬ್ಬ ಉತ್ತಮ ನಾಗರಿಕರಾಗಿ ರೂಪುಗೊಳ್ಳಲು ನಾಲ್ಕು ವರ್ಷಗಳ ಅಧ್ಯಯನ ಒಳ್ಳೆಯ ವೇದಿಕೆ. ಇದನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳಿ’ ಎಂದರು.

ಕಾಲೇಜು ಜೀವನ ಹಲವು ಸಿಹಿ ಕ್ಷಣಗಳನ್ನು ಒದಗಿಸುತ್ತದೆ. ಅವುಗಳನ್ನು ಆಸ್ವಾದಿಸಿ, ಪ್ರತಿದಿನ ಕನಿಷ್ಠ 20 ನಿಮಿಷವಾದರೂ ಗ್ರಂಥಾಲಯದಲ್ಲಿ ಸಮಯ ಕಳೆಯಿರಿ. ಇದರಿಂದ ನಿಮ್ಮ ಜ್ಞಾನದ ವೃದ್ಧಿಯಾಗುತ್ತದೆ ಎಂದರು.

ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಉಪ ಕುಲಪತಿ ಡಾ.ಬಾಲಕೃಷ್ಣ ಶೆಟ್ಟಿ ಮಾತನಾಡಿ, ‘ಕಾಲೇಜಿನ ಅಭಿವೃದ್ಧಿಯಲ್ಲಿ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆ ತುಂಬಾ ಮುಖ್ಯವಾದದ್ದು. ಹಾಗೆ ವಿದ್ಯಾರ್ಥಿಗಳನ್ನು ತಿದ್ದಿ ಸರಿದಾರಿಗೆ ತರುವ ಆದ್ಯ ಕರ್ತವ್ಯ ಶಿಕ್ಷಕರದ್ದು. ಇವರಿಬ್ಬರು ಒಂದೇ ಹಾದಿಯಲ್ಲಿ ಸಾಗಿದಾಗ ಮಾತ್ರ ವಿದ್ಯಾರ್ಥಿ ತನ್ನ ಗುರಿ ಮುಟ್ಟಲು ಸಾಧ್ಯ’ ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಕೆ.ವೀರಯ್ಯ, ಡೀನ್ ಡಾ.ಎಂ.ಸಿದ್ದಪ್ಪ, ರಿಜಿಸ್ಟ್ರಾರ್ ಡಾ.ಎಮ್.ಝೆಡ್.ಕುರಿಯನ್, ಪರೀಕ್ಷಾಂಗ ವಿಭಾಗದ ರಿಜಿಸ್ಟ್ರಾರ್ ಡಾ.ಕರುಣಾಕರನ್, ಆಡಳಿತಾಧಿಕಾರಿ ಡಾ. ವೈ.ಎಂ.ರೆಡ್ಡಿ, ವಿಭಾಗದ ಮುಖ್ಯಸ್ಥರು,ಪೋಷಕರು ಹಾಗೂ ವಿದ್ಯಾರ್ಥಿಗಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.