ADVERTISEMENT

ತಿಪಟೂರು: ರೈತರಿಗೆ ಕೋಳಿಮರಿ ವಿತರಣೆ

​ಪ್ರಜಾವಾಣಿ ವಾರ್ತೆ
Published 23 ಮೇ 2025, 13:11 IST
Last Updated 23 ಮೇ 2025, 13:11 IST
ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ರೈತ ಮಹಿಳೆಯರಿಗೆ ಶಾಸಕ ಕೆ.ಷಡಕ್ಷರಿ ಕೋಳಿ ಮರಿ ವಿತರಿಸಿದರು
ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ರೈತ ಮಹಿಳೆಯರಿಗೆ ಶಾಸಕ ಕೆ.ಷಡಕ್ಷರಿ ಕೋಳಿ ಮರಿ ವಿತರಿಸಿದರು   

ತಿಪಟೂರು: ನಗರದ ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿರುವ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ 38 ರೈತ ಮಹಿಳೆಯರಿಗೆ ಶಾಸಕ ಕೆ.ಷಡಕ್ಷರಿ ಕೋಳಿ ಮರಿಗಳನ್ನು ವಿತರಿಸಿದರು.

ನಂತರ ಮಾತನಾಡಿದ ಅವರು, ಸರ್ಕಾರ ರೈತರನ್ನು ಆರ್ಥಿಕವಾಗಿ ಸದೃಢರನ್ನಾಗಿ ಮಾಡಲು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅದರಂತೆ ಅವುಗಳನ್ನು ಸದ್ಬಳಕೆ ಮಾಡಿಕೊಂಡಾಗ ಉನ್ನತಿ ಹೊಂದಲು ಸಾಧ್ಯವಾಗುತ್ತದೆ ಎಂದರು.

ಹಿಂದಿನ ಸರ್ಕಾರದಲ್ಲಿ ಕುರಿ ಹಾಗೂ ಜಾನುವಾರುಗಳು ಮರಣ ಹೊಂದಿದರೆ ಕನಿಷ್ಠ ಪರಿಹಾರ ನೀಡಲಾಗುತ್ತಿತ್ತು. ಕುರಿ, ಮೇಕೆ ಸತ್ತರೆ ₹7,500, ಹಸು ಎಮ್ಮೆ ಮರಣ ಹೊಂದಿದರೆ ₹15,000 ಪರಿಹಾರ ನೀಡಲಾಗುತ್ತಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಜಾನುವಾರು ಸಂಖ್ಯೆ ಕಡಿಮೆಯಾಗುತ್ತಿದೆ. ಇದರ ಹೆಚ್ಚಳಕ್ಕೆ ಕೆಲಸ ಮಾಡಬೇಕಿದೆ. ಜಾನುವಾರುಗಳಿಗೆ ಮೀಸಲಿರುವ ಗೋಮಾಳ ಪ್ರದೇಶವನ್ನು ಹಿಂದೆ ಬಗುರ್ ಹುಕಂ ಯೋಜನೆಯಲ್ಲಿ ನೀಡಲಾಗುತ್ತಿತ್ತು. ಆದರೆ ಯಾವುದೇ ಕಾರಣಕ್ಕೂ ಗೋಮಾಳ ಜಾಗಗಳನ್ನು ನೀಡಲಾಗುವುದಿಲ್ಲ ಎಂದರು.

ADVERTISEMENT

ಸಹಾಯಕ ನಿರ್ದೇಶಕ ನಂದೀಶ್, ಪಶು ವೈದ್ಯಾಧಿಕಾರಿ ಬಾನುಪ್ರಕಾಶ್, ರಂಜಿತಾ, ಬಳವನೇರಲು ಆಸ್ವತ್ರೆ ಹಿರಿಯ ಪಶು ವ್ಯೆಧ್ಯಕೀಯ ಪರೀಕ್ಷಕ ನಾಗರಾಜು, ಅಭಿಷೇಕ್, ಮಂಜುನಾಥ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.