ADVERTISEMENT

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹತ್ತು ಪರ್ಸೆಂಟ್ ಗಿರಾಕಿ: ರಾಜೇಂದ್ರ

​ಪ್ರಜಾವಾಣಿ ವಾರ್ತೆ
Published 3 ಜೂನ್ 2019, 17:21 IST
Last Updated 3 ಜೂನ್ 2019, 17:21 IST
ಆರ್.ರಾಜೇಂದ್ರ
ಆರ್.ರಾಜೇಂದ್ರ   

ತುಮಕೂರು: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ ಹತ್ತು ಪರ್ಸೆಂಟ್ ಕಮಿಷನ್ ಗಿರಾಕಿಯಾಗಿದ್ದು, ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಗೆ ಓಟು ಹಾಕಿಸಿಲ್ಲ ಎಂದು ಯುವ ಕಾಂಗ್ರೆಸ್ ರಾಜ್ಯ ಘಟಕ ಉಪಾಧ್ಯಕ್ಷ ಹಾಗೂ ಅಪೆಕ್ಸ್‌ ಬ್ಯಾಂಕ್‌ ಅಧ್ಯಕ್ಷ ಕೆ.ಎನ್.ರಾಜಣ್ಣ ಅವರ ಮಗ ಆರ್.ರಾಜೇಂದ್ರ ಆರೋಪಿಸಿದರು.

ಮಾಧ್ಯಮದವರೊಂದಿಗೆ ಮಾತನಾಡಿ, ‘ಸಂಜೆಯಾಗುತ್ತಿದ್ದಂತೆಯೇ ಯಾರು ದುಡ್ಡು ಕೊಡುತ್ತಿದ್ದರೊ ತೆಗೆದುಕೊಂಡು ಹತ್ತು ಪರ್ಸೆಂಟ್ ಇಟ್ಟುಕೊಂಡು ಕೊಡುವ ಕೆಲಸ ಮಾಡಿದ್ದಾನೆ. ಈಚೆಗೆ ನಡೆದ ತುಮಕೂರು ಮಹಾನಗರ ಪಾಲಿಕೆ 22ನೇ ವಾರ್ಡಿಗೆ ಸ್ಪರ್ಧಿಸಿದ ಪಕ್ಷದ ಅಭ್ಯರ್ಥಿ ಕಡೆಯಿಂದಲೂ ದುಡ್ಡು ಪಡೆದಿದ್ದಾನೆ’ ಎಂದು ಆರೋಪಿಸಿದರು.

‘ಎಚ್.ಡಿ.ದೇವೇಗೌಡರ ಸೋಲಿಗೆ ಕೆ.ಎನ್.ರಾಜಣ್ಣ, ಅವರ ಮಗ ರಾಜೇಂದ್ರ ಕಾರಣ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಿಗೆ ಜಿಲ್ಲಾ ಘಟಕ ಅಧ್ಯಕ್ಷ ರಾಮಕೃಷ್ಣ ವರದಿ ಕೊಟ್ಟಿದ್ದಾನೆ. ದೇವೇಗೌಡರೇನೂ ರಾಜಣ್ಣ ಅವರ ಮನೆಗೆ ಬಂದು ಬೆಂಬಲಿಸಿ ಎಂದು ಕೇಳಿರಲಿಲ್ಲ. ಹೀಗಾಗಿ, ರಾಜಣ್ಣ ಅವರು ಚುನಾವಣೆಯಲ್ಲಿ ತಟಸ್ಥವಾಗಿದ್ದರು. ಅವರ ಬೆಂಬಲಿಗರು, ಅಭಿಮಾನಿಗಳು ತಮಗನಿಸಿದಂತೆ ತೀರ್ಮಾನ ಮಾಡಿ ಚುನಾವಣೆ ಮಾಡಿದ್ದಾರೆ’ ಎಂದರು.

ADVERTISEMENT

'ಇಲ್ಲಿ ಮೈತ್ರಿ ಅಭ್ಯರ್ಥಿ ಸೋತಿದ್ದಾರೆ ನಿಜ. ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಯಾಕೆ ಸೋತರು' ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.