ADVERTISEMENT

ಶ್ರೀಗಳ ಹೆಸರಿಗೆ ಭಂಗ ತರದಿರಿ

ಸಿದ್ಧಗಂಗಾ ಮಠದ ಅಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಮನವಿ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2019, 18:53 IST
Last Updated 28 ಮಾರ್ಚ್ 2019, 18:53 IST
ಸಿದ್ಧಲಿಂಗ ಸ್ವಾಮೀಜಿ
ಸಿದ್ಧಲಿಂಗ ಸ್ವಾಮೀಜಿ   

ತುಮಕೂರು: ‘ಶಿವಕುಮಾರ ಸ್ವಾಮೀಜಿ ಅವರ ಹೆಸರು ಹಾಗೂ ಅವರ ಜನ್ಮ ದಿನೋತ್ಸವದ ಹೆಸರಿನಲ್ಲಿ ಸಾವಿರಾರು ಹಣ ಪಡೆಯಲಾಗುತ್ತಿದೆ ಎಂಬ ಆರೋಪವಿದೆ. ಅಂತಹವರಿಗೆ ಸಹಕರಿಸದಿರಿ’ ಎಂದು ಸಿದ್ಧಗಂಗಾ ಮಠದ ಅಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಮನವಿ ಮಾಡಿದರು.

ಸಿದ್ಧಗಂಗಾ ಮಠದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ನಗರದಲ್ಲಿ ಶ್ರೀಗಳ ಹೆಸರಿನಲ್ಲಿ ಕೆಲ ಕಿಡಿಗೇಡಿಗಳು ಲಕ್ಷಾಂತರ ಹಣ ವಸೂಲಿ ಮಾಡುತ್ತಿದ್ದು, ಆ ಹಣದಲ್ಲಿ ನಾಮಮಾತ್ರ ಶ್ರೀಗಳ ಹೆಸರಿನಲ್ಲಿ ಕಾರ್ಯಕ್ರಮ ಮಾಡಿ ಉಳಿಕೆ ಹಣದ ಮಾಹಿತಿ ನೀಡಿದೆ ದೂಚುತ್ತಿದ್ದಾರೆ. ಅದಕ್ಕೆ ಕಡಿವಾಣ ಹಾಕಬೇಕು ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.

‘ಮಠಕ್ಕೆ ಏನಾದರೂ ಬೇಕಾದ್ದಲ್ಲಿ ಅಧಿಕೃತವಾಗಿ ಮಠದ ಅಧಿಕಾರಿಗಳೇ ಮಠ ‍ಪತ್ರದೊಂದಿಗೆ ಬರುತ್ತಾರೆ. ಅಂತಹವರಿಗೆ ನೀಡಿ ಹಾಗೂ ಮಠದ ರಶೀದಿಯನ್ನು ಅವರಿಂದ ಪಡೆದುಕೊಳ್ಳಿ’ ಎಂದರು.

ADVERTISEMENT

‘ಯಾರಿಗೂ ಮಠಕ್ಕೆ ಇದು ಬೇಕು, ಅದು ಬೇಕೆಂದು ಕೇಳಿಲ್ಲ. ಆದರೂ ಶಿವಕುಮಾರ ಸ್ವಾಮೀಜಿ ಅವರ ಮೇಲಿನ ಪ್ರೀತಿಗೆ ಭಕ್ತಾದಿಗಳೇ ಹಣದಿಂದ ಹಿಡಿದು ಎಲ್ಲ ರೀತಿಯ ವಸ್ತುಗಳನ್ನು ಮಠಕ್ಕೆ ಸಮರ್ಪಿಸುತ್ತಿದ್ದಾರೆ’ ಎಂದು ತಿಳಿಸಿದರು.

‘ಶ್ರೀಗಳ ಹೆಸರಿನಲ್ಲಿ ಹಣ ಸೇರಿದಂತೆ ಇನ್ನಿತರ ವಸ್ತುಗಳನ್ನು ಕೇಳಲು ಯಾರೇ ಬಂದರೂ ನೀಡಿದಿರಿ. ಅವರಿಂದ ರಶೀದಿಯನ್ನು ಪಡೆಯಿರಿ. ಶ್ರೀಗಳ ಹಾಗೂ ಮಠದ ಹೆಸರನ್ನು ಕಡೆಸದಿರಿ’ ಎಂದು ಮನವಿ ಮಾಡಿದರು.

ನಗರದಲ್ಲಿ ಶ್ರೀಗಳ ಜನ್ಮ ದಿನೋತ್ಸವಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ಮಾಡಲು ಈಗಾಗಲೇ ಸಿದ್ಧತೆ ಮಾಡಿಕೊಂಡಿದ್ದು, ಅಂತಹವರಿಗೆ ಕಾರ್ಯಕ್ರಮ ಮಾಡಬೇಡಿ ಎಂದು ಹೇಳಲು ಸಾಧ್ಯವಿಲ್ಲ. ಅಲ್ಲದೆ ಅವರಿಗೆ ಅನಾವ್ಯಕವಾಗಿ ನಿಂಧನೆ ಮಾಡಿದಂತಿರುತ್ತದೆ ಎಂಬ ಕಾರಣಕ್ಕಾಗಿ ಈ ವರ್ಷ ಯಾವುದೇ ಅಡ್ಡಿ ಪಡಿಸುವುದಿಲ್ಲ ಎಂದರು.

ಶ್ರೀಗಳ ಹೆಸರಿಗೆ ಭಂಗ ಉಂಟು ಮಾಡಬಾರದು, ಅವರ ಹೆಸರಿನಲ್ಲಿ ಸಾವಿರಾರೂ ಹಣವನ್ನು ಭಕ್ತಾದಿಗಳಿಂದ ಪಡೆಯುವುದು ಸೇರಿದಂತೆ ಇನ್ನಿತರ ಅಕ್ರಮ ಕೆಲಸಗಳನ್ನು ತಡೆಯುವ ನಿಟ್ಟಿನಲ್ಲಿ ಮುಂದಿನ ವರ್ಷದಿಂದ ಕಡಿವಾಣ ಹಾಕಲಾಗುವುದು. ಅಷ್ಟೂ ಕಾರ್ಯಕ್ರಮ ಮಾಡುವುದಾದರೆ ಮಠದಲ್ಲಿಯೇ ಮಾಡಲಿ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.