ADVERTISEMENT

ಮುನಿಶ್ರೀ ಮಂಗಳ ಪ್ರವೇಶ; ಭಕ್ತರಿಂದ ಪುಷ್ಪವೃಷ್ಟಿ

​ಪ್ರಜಾವಾಣಿ ವಾರ್ತೆ
Published 7 ಜುಲೈ 2019, 15:24 IST
Last Updated 7 ಜುಲೈ 2019, 15:24 IST
ಕಾರ್ಯಕ್ರಮದಲ್ಲಿ ಜೈನಮುನಿಗಳಿಗೆ ಭಕ್ತರು ಪುಷ್ಪವೃಷ್ಟಿ ನೆರವೇರಿಸಿದರು
ಕಾರ್ಯಕ್ರಮದಲ್ಲಿ ಜೈನಮುನಿಗಳಿಗೆ ಭಕ್ತರು ಪುಷ್ಪವೃಷ್ಟಿ ನೆರವೇರಿಸಿದರು   

ತುಮಕೂರು: ನಗರದ ಚಿಕ್ಕಪೇಟೆಯ ಯುಗಳ ಮುನಿಗಳ ಚಾತುರ್ಮಾಸ ಸಮಿತಿ ನೇತೃತ್ವದಲ್ಲಿ ಭಾನುವಾರ ಮುನಿಶ್ರೀಗಳ ಮಂಗಳ ಪುರ ಪ್ರವೇಶ ಕಾರ್ಯಕ್ರಮ ನಡೆಯಿತು. ಜೈನ ಭವನದಿಂದ ಚಿಕ್ಕಪೇಟೆಯ ಜಿನ ಮಂದಿರದವರೆಗೆ ಮೆರವಣಿಗೆ ನಡೆಯಿತು.

ಬಿ.ಎಚ್.ರಸ್ತೆಯ ಜೈನ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರವಣಬೆಳಗೊಳದ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ, ನರಸಿಂಹರಾಜಪುರದ ಸಿಂಹನಗದ್ದೆ ಬಸ್ತಿಮಠದ ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ, ಮಂಡ್ಯ ಜಿಲ್ಲೆ ಆರತಿಪುರ ಜೈನಮಠದ ಸಿದ್ಧಾಂತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಅವರಿಗೆ ಭಕ್ತರು ಪುಷ್ಪವೃಷ್ಟಿ ನೆರವೇರಿಸಿ, ಫಲಪುಷ್ಪ ನೀಡಿ ಗೌರವ ಸಲ್ಲಿಸಿದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್, ಜೈನ ಸಮಾಜದ ಮುಖಂಡರಾದ ಸುರೇಂದ್ರಕುಮಾರ್ ಹೆಗ್ಗಡೆ, ಅನಿತಾ ಸುರೇಂದ್ರಕುಮಾರ್ ಹೆಗ್ಗಡೆ, ತುಮಕೂರು ಜೈನ್ ಸಮಾಜದ ಮಾಜಿ ಅಧ್ಯಕ್ಷರಾದ ಸನ್ಮತಿಕುಮಾರ್, ಅಧ್ಯಕ್ಷರಾದ ಟಿ.ಎನ್.ಅಜಿತ್, ಬಾಹುಬಲಿಬಾಬು, ವಿಜಯಕುಮಾರ್, ಎಸ್.ವಿ.ಜಿನೇಶ್, ಸುಬೋಧ್‌ಕುಮಾರ್ ಜೈನ್, ಬಿ.ಎಸ್. ಪಾರ್ಶ್ವನಾಥ್, ಕೆ.ಪಿ.ವೀರೇಂದ್ರ ಸೇರಿದಂತೆ ಜೈನ ಸಮುದಾಯದ ಮುಖಂಡರು ಪಾಲ್ಗೊಂಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.