ತುಮಕೂರು: ಹವಾಮಾನ ವೈಪರೀತ್ಯಕ್ಕೆ ನಮ್ಮ ಬೇಜವಾಬ್ದಾರಿ ನಡೆ ಕಾರಣ. ನಾವು ಪ್ರಕೃತಿ ಜತೆಗೆ ಜೀವಿಸುವುದು ಕಲಿಯಬೇಕು ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಹೇಳಿದರು.
ನಗರದಲ್ಲಿ ಶನಿವಾರ ವಿದ್ಯಾನಗರ ಕ್ಷೇಮಾಭಿವೃದ್ಧಿ ಸಂಘವು ವಿವೇಕಾನಂದ ವಿದ್ಯಾಸಂಸ್ಥೆ, ರೋಟರಿ ತುಮಕೂರು, ಅರಣ್ಯ ಇಲಾಖೆ, ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮುಖಂಡ ಟಿ.ಆರ್.ಸದಾಶಿವಯ್ಯ, ‘ಬಡಾವಣೆಯ ಸಂಘ ಇತರರಿಗೆ ಮಾದರಿಯಾಗಿದೆ. ಮನೆಯ ಮುಂದೆ ನೆಟ್ಟಿರುವ ಮರಗಳನ್ನು ಮಕ್ಕಳಂತೆ ಪೋಷಿಸಬೇಕು. ಉತ್ತಮ ಗಾಳಿ ಸೇವನೆಯಿಂದ ಆರೋಗ್ಯ ಸುಧಾರಿಸುತ್ತದೆ’ ಎಂದರು.
ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಟಿ.ಆರ್.ಆಂಜನಪ್ಪ, ‘ಸಂಘದಿಂದ ವಿವಿಧ ಉಪಯುಕ್ತ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಇದು ಬಡಾವಣೆಯ ಪ್ರಗತಿಯ ಸಂಕೇತ’ ಎಂದು ತಿಳಿಸಿದರು.
ಎನ್‌ಸಿಸಿ ಅಧಿಕಾರಿ ರಾಮಲಿಂಗಾರೆಡ್ಡಿ, ಶಿಕ್ಷಕಿ ಸುಲೋಚನಾ, ಕ್ಷೇಮಾಭಿವೃದ್ಧಿ ಸಂಘದ ಎಸ್.ಕುಮಾರಸ್ವಾಮಿ, ದೇವೇಂದ್ರ, ಚಿಕ್ಕಹನುಮಯ್ಯ, ರವೀಶ್, ನಂಜುಂಡಯ್ಯ, ಪಾರ್ವತಮ್ಮ, ಶಶಿಕಲಾ, ಮಹಂತು, ಗುಪ್ತಾಜಿ, ವಿಜ್ಞಾನ ಕೇಂದ್ರದ ಪಿ.ಪ್ರಸಾದ್, ಟಿ.ಜಿ. ಶಿವಲಿಂಗಯ್ಯ, ರೋಟರಿ ಅಧ್ಯಕ್ಷೆ ರಾಜೇಶ್ವರಿ ರುದ್ರಪ್ಪ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.