ಸಾಂಕೇತಿಕ ಚಿತ್ರ
ತುಮಕೂರು: ನಗರ ಹೊರವಲಯದ ಕ್ಯಾತ್ಸಂದ್ರ ಬಳಿ ರಾಷ್ಟ್ರೀಯ ಹೆದ್ದಾರಿ– 48ರ ಬದಿಯಲ್ಲಿ ಸೋಮವಾರ ಗಂಡು ಭ್ರೂಣ ಪತ್ತೆಯಾಗಿದೆ.
ಮಂಜುನಾಥ್ ಎಂಬುವರು ಮಂಚಕಲ್‌ಕುಪ್ಪೆ ಕಡೆಗೆ ಉಪಾಹಾರ ಸೇವಿಸಲು ಹೊರಟಿದ್ದರು. ದಾರಿ ಮಧ್ಯೆ ವಾಹನ ನಿಲ್ಲಿಸಿದಾಗ ರಸ್ತೆ ಬದಿಯಲ್ಲಿ ಭ್ರೂಣ ಕಂಡು ಬಂದಿದೆ. ಭ್ರೂಣದ ಮೇಲೆ ವಾಹನಗಳು ಹತ್ತಿ ಹೋಗಿವೆ.
‘ಅವಧಿ ಪೂರ್ಣ ಹೆರಿಗೆಯಾಗಿದ್ದರಿಂದ ಪೋಷಕರು ಭ್ರೂಣ ಬಿಟ್ಟು ಹೋಗಿರಬಹುದು. ಹೆರಿಗೆ ವಿಷಯ ಮುಚ್ಚಿಡುವ ಉದ್ದೇಶದಿಂದ ಇಲ್ಲಿ ಎಸೆದಿರಬಹುದು. ಪೋಷಕರನ್ನು ಪತ್ತೆ ಹಚ್ಚಿ ಮುಂದಿನ ಕ್ರಮಕೈಗೊಳ್ಳುವಂತೆ’ ಮಂಜುನಾಥ್ ನೀಡಿದ ದೂರಿನ ಮೇರೆಗೆ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.