ADVERTISEMENT

ಚಾಮರಾಜನಗರದಲ್ಲಿ ಫುಡ್ ಪಾರ್ಕ್ ಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2018, 13:51 IST
Last Updated 8 ಆಗಸ್ಟ್ 2018, 13:51 IST

ತುಮಕೂರು: ಚಾಮರಾಜನಗರದಲ್ಲಿ ಫುಡ್‌ ಪಾರ್ಕ್ ಸ್ಥಾಪನೆಗೆ ಎಲ್ಲ ರೀತಿಯ ಸೌಕರ್ಯ ಒದಗಿಸಲಾಗುವುದು ಬೃಹತ್ ಕೈಗಾರಿಕಾ ಸಚಿವ ಕೆ.ಜೆ.ಜಾರ್ಜ್ ಹೇಳಿದರು.

ಬುಧವಾರ ನಗರದ ಹೊರವಲಯದ ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿನ ಇಂಡಿಯಾ ಫುಡ್ ಪಾರ್ಕ್ ಘಟಕಕ್ಕೆ ಭೇಟಿ ನೀಡಿ ಮಾತನಾಡಿದರು.

‘ಆ ಭಾಗದಲ್ಲಿ ಸಾಂಬಾರ್‌ ಪದಾರ್ಥ ಬಜೆ,ಅರಿಷಿಣ, ಶುಂಠಿ ಬೆಳೆಗಳನ್ನು ಹೆಚ್ಚು ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ಅಲ್ಲಿನ ಬೆಳೆಗಾರರು ಕೊಯಮತ್ತೂರಿಗೆ ಹೋಗಿ ಶೀತಲಗೃಹಗಳಲ್ಲಿ (ಕೋಲ್ಡ್ ಸ್ಟೋರೇಜ್‌) ಉತ್ಪನ್ನಗಳನ್ನು ಇಡುತ್ತಿದ್ದಾರೆ. ಫುಡ್ ಪಾರ್ಕ್ ಸ್ಥಾಪನೆ ಮಾಡಲು ಅಗತ್ಯ ಅನುಕೂಲಗಳನ್ನು ಒದಗಿಸಲಾಗುವುದು. ನೀರು, ವಿದ್ಯುತ್‌ ಸೇರಿ ಎಲ್ಲ ರೀತಿಯ ಮೂಲಸೌಕರ್ಯ ಒದಗಿಸಿಕೊಡಲಾಗುವುದು’ ಎಂದು ಸಚಿವರು, ಫುಡ್ ಪಾರ್ಕ್ ಇಂಡಿಯಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂಜಯ್ ಮಾಕನ್‌ಗೆ ಮನವರಿಕೆ ಮಾಡಿದರು.

ADVERTISEMENT

ಫುಡ್‌ ಪಾರ್ಕ್‌ಗಳ ನಿರ್ವಹಣೆಗೆ ಮುಖ್ಯವಾಗಿ ಯಥೇಚ್ಛ ನೀರು, ವಿದ್ಯುತ್ ಅವಶ್ಯ. ಅವುಗಳನ್ನು ಒದಗಿಸಲು ಸರ್ಕಾರವೇ ಭರವಸೆ ನೀಡುತ್ತಿರುವುದು ಸ್ವಾಗತಾರ್ಹ. ಈ ದಿಶೆಯಲ್ಲಿ ಚಿಂತನೆ ಮಾಡಲಾಗುವುದು ಎಂದು ಮಾಕನ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.