ತುಮಕೂರು: ಆನ್‌ಲೈನ್‌ನಲ್ಲಿ ಯೂಟ್ಯೂಬ್ ರಿವ್ಯೂ ನೀಡಿದರೆ ಕಮಿಷನ್ ಕೊಡಲಾಗುವುದು ಎಂದು ನಂಬಿಸಿ ನಗರದ ಸದಾಶಿವನಗರದ ಆಫಿಯಾ ಮುಸ್ಕಾನ್ ಎಂಬುವರಿಗೆ ₹11.88 ಲಕ್ಷ ವಂಚಿಸಲಾಗಿದೆ.
ವಾಟ್ಸ್ ಆ್ಯಪ್ ಮುಖಾಂತರ ಪರಿಚಯಿಸಿಕೊಂಡ ವಂಚಕರು ಪಾರ್ಟ್‌ಟೈಮ್ ಕೆಲಸದ ಬಗ್ಗೆ ತಿಳಿಸಿದ್ದಾರೆ. ನಂತರ ಟೆಲಿಗ್ರಾಮ್‌ನಲ್ಲಿ ಮೆಸೇಜ್ ಮಾಡಿ ಕೆಲಸ ಕುರಿತು ಹೇಳಿದ್ದಾರೆ. ಮೊದಲ ಬಾರಿಗೆ ರಿವ್ಯೂ ನೀಡುವ ಟಾಸ್ಕ್ ಪೂರ್ಣಗೊಳಿಸಿದ ಆಫಿಯಾ ಖಾತೆಗೆ ₹123 ವರ್ಗಾಯಿಸಿದ್ದಾರೆ. ಇದಾದ ಬಳಿಕ ₹1 ಸಾವಿರ ವರ್ಗಾವಣೆ ಮಾಡಿ ಟಾಸ್ಕ್ ಪಡೆದಿದ್ದರು. ಟಾಸ್ಕ್ ಮುಗಿಸಿದ ನಂತರ ಕಮಿಷನ್ ಸೇರಿಸಿ ₹1,423 ಹಾಕಿದ್ದಾರೆ.
ಇನ್ನೂ ಹೆಚ್ಚಿನ ಹಣ ಹೂಡಿಕೆ ಮಾಡಿ ಟಾಸ್ಕ್ ಪಡೆದರೆ, ಕಮಿಷನ್ ಜಾಸ್ತಿ ಸಿಗುತ್ತದೆ ಎಂದು ತಿಳಿಸಿದ್ದಾರೆ. ಇದನ್ನು ನಂಬಿದ ಆಫಿಯಾ ಹಂತಹಂತವಾಗಿ ಒಟ್ಟು ₹12.45 ಲಕ್ಷ ಹಣವನ್ನು ವಿವಿಧ ಬ್ಯಾಂಕ್ ಖಾತೆ ಮತ್ತು ಯುಪಿಐ ಐ.ಡಿಗಳಿಗೆ ವರ್ಗಾವಣೆ ಮಾಡಿದ್ದಾರೆ. ಇದರಲ್ಲಿ ಅವರಿಗೆ ₹56 ಸಾವಿರ ವಾಪಸ್ ಬಂದಿದೆ.
ಪಾರ್ಟ್ ಟೈಮ್ ಕೆಲಸದ ಆಮಿಷವೊಡ್ಡಿ ಹಣ ವಂಚಿಸಿದವರನ್ನು ಪತ್ತೆ ಹಚ್ಚಿ, ಕಾನೂನು ಕ್ರಮಕೈಗೊಳ್ಳುವಂತೆ ಸೈಬರ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.