ADVERTISEMENT

ಜೂಜು: 11 ಮಂದಿ ಬಂಧನ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2019, 15:15 IST
Last Updated 17 ಡಿಸೆಂಬರ್ 2019, 15:15 IST

ತುಮಕೂರು: ಕ್ಯಾತ್ಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಯ ಡಣನಾಯ್ಕನಪುರದ ಬೆಟ್ಟದ ಬುಡದಲ್ಲಿ ಸೋಮವಾರ ಸಂಜೆ ಜೂಜಾಡುತ್ತಿದ್ದ 11 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ₹ 45 ಸಾವಿರ ಹಾಗೂ 4 ಬೈಕ್ ವಶಪಡಿಸಿಕೊಂಡಿದ್ದಾರೆ.

ಮಾರನಾಯ್ಕನಪಾಳ್ಯದ ರಾಘವೇಂದ್ರ, ಬಿದಿರುಮೆಳೆ ತೋಟದ ಇಲಿಯಾಸ್, ರಕ್ಷಿತ್, ಕೆಸರುಮಡುವಿನ ನಾಗೇಶ್, ರಾಮನಹಳ್ಳಿಯ ಹೊನ್ನೇಗೌಡ, ದೇವರಾಯಪಟ್ಟಣದ ಯೋಗೀಶ್, ಹನುಮಂತಪುರದ ಗಂಗರಾಜು, ವಿನಯ್ ಕುಮಾರ್, ದೇವನೂರಿನ ಭಾಸ್ಕರ್, ಬಡ್ಡಿಹಳ್ಳಿಯ ಪುನೀತ್, ಶಿರಾಗೇಟ್ ಸಾಡೇಪುರದ ಮಧುಕುಮಾರ್ ಬಂಧಿತರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT